Select Your Language

Notifications

webdunia
webdunia
webdunia
webdunia

ಸಾವಿರ ಕೋಟಿ ವೆಚ್ಚ ಮಹಾಭಾರತ ಸಿನಿಮಾದಲ್ಲಿ ಭೀಮ ಯಾರು ಗೊತ್ತಾ?

ಸಾವಿರ ಕೋಟಿ ವೆಚ್ಚ ಮಹಾಭಾರತ ಸಿನಿಮಾದಲ್ಲಿ ಭೀಮ ಯಾರು ಗೊತ್ತಾ?
NewDelhi , ಮಂಗಳವಾರ, 23 ಮೇ 2017 (09:07 IST)
ನವದೆಹಲಿ: ಸಾವಿರ ಕೋಟಿ ರೂ. ವೆಚ್ಚದ ಮಹಾಭಾರತ ಎನ್ನುವ ಬಹುಭಾಷಾ ಚಿತ್ರವೊಂದು ತಯಾರಾಗುತ್ತಿರುವ ಸುದ್ದಿ ನೀವು ಈಗಾಗಲೇ ಓದಿರುತ್ತೀರಿ. ಈ ಚಿತ್ರದಲ್ಲಿ ಭೀಮನ ಪಾತ್ರ ಮಾಡುತ್ತಿರುವವರು ಯಾರು ಗೊತ್ತಾ?

 
ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್. ಕನ್ನಡಿಗ ಬಿ.ಆರ್. ಶೆಟ್ಟಿ ನಿರ್ಮಿಸುತ್ತಿರುವ ಬಹುಕೋಟಿ ವೆಚ್ಚದ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ದುಬಾರಿ ಸಿನಿಮಾ ಎಂಬ ದಾಖಲೆ ಮಾಡಲಿದೆ.

ಮಲಯಾಳಂನ ರಂಡಾಮೂಳಂ ಕಾದಂಬರಿ ಆಧಾರಿತ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜರೆಲ್ಲಾ ನಟಿಸಲಿದ್ದಾರೆ ಎಂಬ ಸುದ್ದಿಯಾಗಿದೆ. ಶ್ರೀಕುಮಾರ್ ಇದರ ನಿರ್ದೇಶಕರು. ಮೂಲಗಳ ಪ್ರಕಾರ ಚಿತ್ರೀಕರಣ ಅಬುದಾಬಿಯಲ್ಲಿ ನಡೆಯಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನಟ ಲೂಸ್ ಮಾದಾ ಯೋಗಿಗೆ ಕಂಕಣಬಲ