ನಟಿ ಹೇಮ ಮಾಲಿನಿ ದೀಪಿಕಾ ಪಡುಕೋಣೆ ಎಂಗೇಜ್‌ಮೆಂಟ್‌ಗೆ ಶುಭಾಷಯ ತಿಳಿಸಿದ್ದಾರೆ. ಇದು ಎಲ್ಲರಿಗೂ ಸರ್‌ಪ್ರೈಜ್ ಮೂಡುವಂತೆ ಮಾಡಿದೆ. ಹೇಮಮಾಲಿನಿ ತಮ್ಮ ಟ್ವಿಟರ್ ನಲ್ಲಿ ಈ ಕುರಿತು ಟ್ವಿಟ್ ಮಾಡಿದ್ದಾರೆ.
ದೀಪಿಕಾ ಎಂಗೇಜ್‌ಮೆಂಟ್‌ಗಾಗಿ ವಿಶ್ ಮಾಡಿದ್ದಾರೆ ಹೇಮಮಾಲಿನಿ, ಇಬ್ಬರ ಭವಿಷ್ಯ ಚೆನ್ನಾಗಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ, ಎಂದು ತಿಳಿಸಿದ್ದಾರೆ. ಇದರಿಂದ ದೀಪಿಕಾ ಫಾಲೋವರ್ಸ್ ಹಾಗೂ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು.
ದೀಪಿಕಾ ಮೊನ್ನೆ ತಾನೆ ಹಾಲಿವುಡ್‌ನ ಚಿತ್ರ The Return of Xander Cage’ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ. ಆದರೆ ಧಿಡೀರ್ ದೀಪಿಕಾ ಯಾರನ್ನು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ? ಎಂದು ಹಲವರ ಪ್ರಶ್ನೆಯಾಗಿತ್ತು.
ಆದರೆ ಈ ಬಗ್ಗೆ ಅಭಿಮಾನಿಗಳು ಕೇಳಲಾದ ಪ್ರಶ್ನೆಗೆ ಹೇಮಮಾಲಿನಿ ಸ್ಪಷ್ಟನೆ ನೀಡಿದ್ದಾರೆ ಅದು ಮಿಸ್ ಪಡುಕೋಣೆ ಅಲ್ಲ, ದೀಪಿಕಾ ಅಷ್ಟೆ ಎಂದು ತಿಳಿಸಿದ್ದಾರೆ.
ಇನ್ನೂ ದೀಪಿಕಾ ರೇಸ್-3 ಚಿತ್ರದಲ್ಲಿ ನಟಿಸಲಿದ್ದಾರೆ. ಇದಕ್ಕಾಗಿ ಅವರು ಚಿತ್ರಕ್ಕಾಗಿ ಯೆಸ್ ಎಂದಿದ್ದಾರಂತೆ. ಆದರೆ ಸೈಫ್ ಅಲಿ ಖಾನ್ ಜೊತೆಗೆ ದೀಪ್ಸ್ ರೋಮ್ಯಾನ್ಸ್ ಮಾಡಲಿದ್ದಾರಂತೆ. ಕೆಲ ಮೂಲಗಳ ಪ್ರಾಕಾರ ಚಿತ್ರದಲ್ಲಿ ದೀಪಿಕಾ ಜೊತೆ ನಟಿಸಲಿರುವ ನಟ ಯಾರು ಎಂಬುದು ಗೂತ್ತಾಗಿಲ್ಲ. ಆದರೆ ದೀಪಿಕಾ ರೇಸ್-3 ಸಿನಿಮಾದಲ್ಲಿ ರಣಬೀರ್ ಸಿಂಗ್ ಸೈಫ್ ಅಲಿ ಖಾನ್ ಜೊತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗ್ತಿದೆ.