'ಡಿಶೂಂ' ಚಿತ್ರ ರಿಲೀಸ್ ಕಾಣಲು ಇನ್ನೇನು ಕೆಲ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರದಲ್ಲಿ ಚಿತ್ರತಂಡ ಬ್ಯೂಸಿ ಇದೆ. ಇವತ್ತು ಡಿಶೂಂ ಚಿತ್ರತಂಡ ಚಿತ್ರದ ಪ್ರಚಾರಕ್ಕಾಗಿ ನೋಯ್ಡಾಗೆ ತೆರಳಿ ಅಲ್ಲಿ ಪ್ರಚಾರ ಮಾಡಿದ್ದು ಕಂಡು ಬಂತು. ಈ ವೇಳೆ ವರುಣ್ ಧವನ್, ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಜಾನ್ ಅಬ್ರಾಹಂ ಭರ್ಜರಿಯಾಗಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಚಿತ್ರದ ಸಾಂಗ್ಗೆ ಜಾಕ್ವೆಲಿನ್ ಸಖತ್ ಆಗಿ ಹೆಜ್ಜೆ ಹಾಕಿದ್ದು ಕಂಡು ಬಂತು.
ನೋಯ್ಡಾದಲ್ಲಿ ಹೆಚ್ಚು ಹೀಟ್ ಇದ್ದರೂ ಸಹ ಚಿತ್ರದ ಪ್ರಚಾರವನ್ನು ಕೈಗೊಂಡಿದ್ದ ಜಾಕ್ವೆಲಿನ್, ವರುಣ್ ಧವ. ಆ ಬಳಿಕ ಅನಾರೋಗದ ನಿಮಿತ್ಯ ಜಾನ್ ಅಬ್ರಾಹಂ ಡಾಕ್ಟರ್ರನ್ನು ಕಾಣಲು ತೆರಳಿದ್ದರು.
ನೋಯ್ಡಾದಲ್ಲಿ ಹೆಚ್ಚು ಹೀಟ್ ಇದ್ದರೂ ಸಹ ಚಿತ್ರದ ಪ್ರಚಾರವನ್ನು ಕೈಗೊಂಡಿದ್ದರು. ಆ ಬಳಿಕ ಜಾನ್ ಅಬ್ರಾಹಂ ಡಾಕ್ಟರ್ರನ್ನು ಕಾಣಲು ತೆರಳಿದ್ದರು.
ಡಿಶೂಂ ಚಿತ್ರ ಫುಲ್ ಆ್ಯಕ್ಷನ್ ಡ್ರಾಮಾ ಒಳಗೊಂಡಿದ್ದು, ಚಿತ್ರದಲ್ಲಿ ನರ್ಗಿಸ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಜುಲೈ 29ಕ್ಕೆ ರಿಲೀಸ್ ಆಗಲಿದೆ. ಡಿಶೂಂ ಚಿತ್ರ ಆ್ಯಕ್ಷನ್ ಥ್ರೀಲ್ಲರ್ ಮೂವೀ ಚಿತ್ರದಲ್ಲಿ ಜಾನ್ ಅಬ್ರಾಹಂ, ಜಾಕ್ವೆಲಿನ್ ಫರ್ನಾಡಿಸ್, ವರುಣ್ ಧವನ್, ನರ್ಗಿಸ್ ಫಕ್ರಿ ಮಿಂಚಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ