ಮುಂಬೈ : ಬ್ಲೂ ಫಿಲ್ಮ್ಂ ಕೇಸ್ನಲ್ಲಿ ಸಿಲುಕಿಕೊಂಡಿರುವ ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಸದ್ಯ ಜೈಲಿನಲ್ಲಿದ್ದು, ಇವರ ವಿರುದ್ಧ ಕೋರ್ಟ್ಗೆ ಮುಂಬೈ ಪೊಲೀಸರು ಬುಧವಾರ 1500 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಇದರಲ್ಲಿ ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವರು ನೀಡಿರುವ ಹೇಳಿಕೆಗಳ ಕುರಿತು ಮಾಹಿತಿ ನೀಡಲಾಗಿದೆ. ಖಾಸಗಿಯಾಗಿ ಅಶ್ಲೀಲತೆಯನ್ನು ವೀಕ್ಷಿಸುವುದು ಕಾನೂನುಬದ್ಧವಾಗಿದ್ದರೂ, ಅಶ್ಲೀಲ ಕಂಟೆಂಟ್ ಪ್ರಕಟಿಸುವ ಮತ್ತು ಪ್ರಸಾರ ಮಾಡುವ ವಿರುದ್ಧದ ಕಾನೂನುಗಳು ಭಾರತದಲ್ಲಿ ಕಠಿಣವಾಗಿವೆ. ಇದರ ಅಡಿಯಲ್ಲಿ ರಾಜ್ ಕುಂದ್ರಾ ಸೇರಿದಂತೆ ಅವರ ಕೆಲ ಸಹೋದ್ಯೋಗಿಗಳನ್ನು ಕಳೆದ ಜುಲೈ 19 ರಂದು ಬಂಧಿಸಲಾಗಿದೆ. ಈ ಪತ್ನಿ ಶಿಲ್ಪಾ ಸೇರಿದಂತೆ ನಾಲ್ಕು ಉದ್ಯೋಗಿಗಳು ಆತನ ವಿರುದ್ಧ ಸಾಕ್ಷಿ ಹೇಳಿದ್ದು, ಅವುಗಳನ್ನು ಚಾರ್ಜ್ಷೀಟ್ನಲ್ಲಿ ವಿವರಿಸಲಾಗಿದೆ. ಶಿಲ್ಪಾ ಶೆಟ್ಟಿ ಹೇಳಿದ್ದೇನು?
ತನಿಖಾಧಿಕಾರಿಗಳಿಂದ ಸುದೀರ್ಘ ವಿಚಾರಣೆ ಎದುರಿಸಿದ್ದ ನಟಿ ಶಿಲ್ಪಾ ಶೆಟ್ಟಿ ನೀಡಿರುವ ಹೇಳಿಕೆಗಳನ್ನು ಇದರಲ್ಲಿ ದಾಖಲು ಮಾಡಲಾಗಿದೆ. ನನಗೆ ನನ್ನದೇ ಆದ ಬಹಳಷ್ಟು ಕೆಲಸಗಳು ಇದ್ದುದರಿಂದ ಪತಿ ಏನು ಮಾಡುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದ ಶಿಲ್ಪಾ ಹೇಳಿದ್ದಾರೆ.
2007ರಲ್ಲಿ ನಾನು ಬಿಗ್ ಬ್ರದರ್ ರಿಯಾಲಿಟಿ ಶೋಗೆಂದು ಬ್ರಿಟನ್ ಪ್ರವಾಸದಲ್ಲಿದ್ದೆ. ಈ ಸಂದರ್ಭದಲ್ಲಿ ರಾಜ್ ಕುಂದ್ರಾ ಪರಿಚಯವಾಗಿತ್ತು. ಚಿತ್ರ ನಿರ್ದೇಶಕ ಫರಾತ್ ಹುಸೇನ್ ರಾಜ್ ಅವರನ್ನು ಭೇಟಿ ಮಾಡಿಸಿದ್ದರು. ನಂತರ ನಾವು 2009ರಲ್ಲಿ ಮದುವೆಯಾದವು. ನಂತರ ಮುಂಬೈನಲ್ಲಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದೇವೆ.
ನಾವು ಮದುವೆಯಾಗುವ ಸಂದರ್ಭದಲ್ಲಿ ರಾಜ್ ಅವರು ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೇಲೆ ಇತರ ಮೂವರ ಜತೆ ಪಾರ್ಟನರ್ಷಿಪ್ನಲ್ಲಿದ್ದರು. ಇವರ ಪಾಲು ಶೇ.13ರಷ್ಟಿತ್ತು. ಈ ತಂಡದ ಮೇಲೆ ರಾಜ್ ಕುಂದ್ರಾ ಸುಮಾರು 75 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಅವರ ವಿರುದ್ಧ ಬೆಟ್ಟಿಂಗ್ ದಂಧೆ ಆರೋಪ ಕೇಳಿಬಂದಿದ್ದರಿಂದ ತಂಡವನ್ನು ಅವರು ಬಿಟ್ಟರು.
ಇದಾದ ಬಳಿಕ 2012ರಲ್ಲಿ ಅವರು ಸತ್ಯಯುಗ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಹಾಗೂ ಮೂರು ವರ್ಷಗಳ ನಂತರ ವಿಯಾನ್ ಇಂಡಸ್ಟ್ರೀಸ್ ಶುರು ಮಾಡಿದರು. ವಿಯಾನ್ನಲ್ಲಿ 7 ಮಂದಿ ಶೇರ್ ಹೋಲ್ಡರ್ಗಳು ಇದ್ದು ಇದರಲ್ಲಿ ನನ್ನ ಪಾಲು ಶೇ. 24.50ರಷ್ಟು ಇದೆ. 2015ರಿಂದ 2020ರವರೆಗೆ ನಾನು ಈ ಕಂಪನಿಯ ನಿರ್ದೇಶಕಿಯಾಗಿದ್ದೆ. ಆದರೆ ಕಳೆದ ವರ್ಷ ಕೆಲವು ಕಾರಣಗಳಿಂದಾಗಿ ರಾಜೀನಾಮೆ ನೀಡಿದೆ.
ಸ್ಟ್ರೀಮಿಂಗ್ ಅಪ್ಲಿಕೇಶನ್, ಶಾರ್ಟ್ ವಿಡಿಯೋ ನಿರ್ಮಾಣ, ಚಾಟಿಂಗ್ ಅಪ್ಲಿಕೇಶನ್ಗಳನ್ನು ನಡೆಸುವ ಉದ್ದೇಶದಿಂದ ಕಳೆದ ಡಿಸೆಂಬರ್ನಲ್ಲಿ ಜೆಎಲ್ ಸ್ಟ್ರೀಮ್ ಎಂಬ ಕಂಪೆನಿ ಆರಂಭಿಸಲಾಗಿದೆ. ಇದಕ್ಕೆ ರಾಜ್ ಸಿಇಓ ಆಗಿದ್ದಾರೆ. ಇದರ ನಡುವೆ ಅಂದರೆ 2018ರಲ್ಲಿ ನಾನು ಶಿಲ್ಪಾ ಯೋಗ ಪ್ರೈವೇಟ್ ಲಿಮಿಟೆಡ್ ಕಂಪೆನಿ ಶುರು ಮಾಡಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ನನ್ನ ಹಾಗೂ ರಾಜ್ ಕುಂದ್ರಾರ ಜಾಯಿಂಟ್ ಅಕೌಂಟ್ ಇದೆ. ಇದೇ ಖಾತೆ ಮೂಲಕ ರಾಜ್ ಗೃಹ ಸಾಲ ಪಡೆದಿದ್ದಾರೆ. ನನ್ನ ಇತರೆ ಬ್ಯಾಂಕ್ ಖಾತೆಗಳಿಂದ ಈ ಖಾತೆಗೆ ಗೃಹ ಸಾಲ ತೀರಿಸುವ ಸಲುವಾಗಿ ಹಣ ವರ್ಗಾವಣೆ ಮಾಡಿದ್ದೆ ಎಂದು ಶಿಲ್ಪಾ ಹೇಳಿರುವುದಾಗಿ ಚಾರ್ಜ್ಷೀಟ್ನಲ್ಲಿ ಉಲ್ಲೇಖವಾಗಿದೆ. ನನಗೆ ನನ್ನದೇ ಆದ ಹಲವಾರು ಜವಾಬ್ದಾರಿಗಳು ಇವೆ. ಕಂಪೆನಿಯೊಂದನ್ನೂ ನಾನು ನಡೆಸುತ್ತಿದ್ದೇನೆ. ರಾಜ್ ಕುಂದ್ರಾ ಅವರ ಯಾವುದೇ ಉದ್ಯಮದ ಬಗ್ಗೆ ನಾನು ಹೆಚ್ಚಿಗೆ ಕೇಳುತ್ತಿರಲಿಲ್ಲ. ಅವರು ಕೂಡ ಅದರ ಬಗ್ಗೆ ನನಗೆ ಏನೂ ಹೇಳುತ್ತಿರಲಿಲ್ಲ. ನನಗೆ ಹಲವಾರು ಕಾರ್ಯಚಟುವಟಿಕೆಗಳು ಇದ್ದುದರಿಂದ ಹಾಗೂ ಪತಿಯ ಉದ್ಯಮದ ಮಧ್ಯೆ ಪ್ರವೇಶ ಮಾಡಲು ಇಷ್ಟವಿಲ್ಲದ ಕಾರಣ ಅವರು ಏನು ಮಾಡುತ್ತಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬರಲೇ ಇಲ್ಲ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿಯೂ ಇರಲಿಲ್ಲ ಎಂದು ಶಿಲ್ಪಾ ಹೇಳಿದ್ದಾರೆ.
ಅದೇ ಇನ್ನೊಂದೆಡೆ, ರಾಜ್ ಕುಂದ್ರಾ ಪರ ವಕೀಲರು ತಮ್ಮ ಕಕ್ಷಿದಾರರು ಮಾಡಿರುವ ವಿಷಯವನ್ನು ಕಾಮಪ್ರಚೋದಕ ಎಂದು ವರ್ಗೀಕರಿಸಬಹುದು ಆದರೆ ಅಶ್ಲೀಲವಲ್ಲ ಮತ್ತು ನೆಟ್ಫ್ಲಿಕ್ಸ್ನಂತಹ ಓಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಇದೇ ರೀತಿಯ ವಿಡಿಯೋ ಲಭ್ಯವಿವೆ ಎಂದು ವಾದಿಸಿದ್ದಾರೆ.