Select Your Language

Notifications

webdunia
webdunia
webdunia
webdunia

ಅಭಿಮಾನಿಗಳ ಮುನಿಸಿಗೆ ಕಾರಣವಾಗಲು ನಟಿ ದೀಪಿಕಾ ಪಡುಕೋಣೆ ಮಾಡಿದ್ದಾದರೂ ಏನು?

ಅಭಿಮಾನಿಗಳ ಮುನಿಸಿಗೆ ಕಾರಣವಾಗಲು ನಟಿ ದೀಪಿಕಾ ಪಡುಕೋಣೆ ಮಾಡಿದ್ದಾದರೂ ಏನು?
ಮುಂಬೈ , ಮಂಗಳವಾರ, 29 ಮೇ 2018 (07:44 IST)
ಮುಂಬೈ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಚಾಲೆಂಜ್ ನಡೆಯುತ್ತಿದ್ದ ಕಾರಣ ಇದನ್ನು ಸ್ವೀಕರಿಸಿದ ಬಾಲಿವುಡ್ ನಟ ಹೃತಿಕ್ ರೋಶನ್ ಅವರು ಟ್ರೋಲ್ ಗೆ ಗುರಿಯಾಗಿದ್ದರು. ಅದೇರೀತಿ ಇದೀಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಕೂಡ ಈ ವಿಚಾರವಾಗಿ ಟ್ರೋಲ್ ಗೆ ಒಳಗಾಗಿದ್ದಾರೆ.


ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ನೀಡಿದ್ದ ಚಾಲೆಂಜ್ ಸ್ವೀಕರಿಸಿದ ನಟಿ ದೀಪಿಕಾ ಅವರು,’ ಫಿಟ್ನೆಸ್ ಗೆ ನಾನು ಮಹತ್ವ ನೀಡ್ತೇನೆ. ಇತ್ತೀಚಿನ ದಿನಗಳಲ್ಲಿ ರನ್ನಿಂಗ್ ಹೆಚ್ಚು ಇಷ್ಟಪಡ್ತೇನೆ’  ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ.

ಆದರೆ ಅವರು ಅಪ್ಲೋಡ್ ಮಾಡಿದ ವಿಡಿಯೋ  ಚಾಲೆಂಜ್ ಸ್ವೀಕರಿಸಿದ ನಂತರ ರೆಕಾರ್ಡ್ ಮಾಡಿದ ವಿಡಿಯೋ ಆಗಿರದೆ ಹಳೆ ವಿಡಿಯೋ ಆಗಿತ್ತು. ಇದು ಅಭಿಮಾನಿಗಳ ಮುನಿಸಿಗೂ ಕಾರಣವಾಗಿದ್ದು,’ ನಾವು ಹೊಸದನ್ನು ಬಯಸ್ತೇವೆ. ದಯವಿಟ್ಟು ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಳ್ಳಿ’ ಎಂದು ಟ್ರೋಲ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

20 ವರ್ಷಗಳ ವೈವಾಹಿಕ ಜೀವನಕ್ಕೆ ಎಳ್ಳುನೀರು ಬಿಡಲು ಹೊರಟ ನಟ ಅರ್ಜುನ್ ರಾಂಪಾಲ್ ಹಾಗೂ ಮೆಹರ್ ಜೆಸ್ಸಿಯಾ