ಸನ್ನಿ ಫ್ಯಾನ್‌ಗೆ ಇದೀಗ ನಿರಾಸೆಯಾಗಬಹುದು.. ಯಾಕಂದ್ರೆ ಮೊನ್ನೆ ಹೈದ್ರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ವೆಬ್‌ಸೈಟ್‌ಲ್ಲಿ ಸನ್ನಿ ಚಿತ್ರ ಪ್ರಕಟಗೊಂಡಿತ್ತು. ಅದಾದ ಬಳಿಕ ಇದೀಗ ಮತ್ತೆ ಸನ್ನಿ ಲಿಯೋನ್ ಚಿತ್ರಗಳನ್ನು ನಿಷೇಧ ಮಾಡುವಂತೆ ಮಾತುಗಳು ಕೇಳಿ ಬಂದಿದೆ.
ವೆಬ್‌ಸೈಟ್‌ನಲ್ಲಿ ಸನ್ನಿ ಲಿಯೋನ್‌ಳ ಹಾಟ್ ಚಿತ್ರಗಳನ್ನು ನಿಷೇಧ ಹೇರುವಂತೆ ಮಹಿಳಾ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.. ಹಿಂದು ಜನ ಜಾಗೃತಿ ಸಮಿತಿಯ ಮಹಿಳಾ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾಗಿದೆ.
ಯಾಕಂದ್ರೆ ಸನ್ನಿಯ ಚಿತ್ರಗಳು ಆಕ್ಷೇಪಾರ್ಹ ಹಾಗೂ ಅಶೀಲ್ಲವಾಗಿವೆಯಂತೆ. ಹಾಗಾಗಿ ಸೈಟ್‌ನಲ್ಲಿ ಸನ್ನಿಯ ಹಾಟ್ ಚಿತ್ರಗಳನ್ನು ನಿಷೇಧಿಸಬೇಕು ಎಂದು ಪೋಲಿಸ್ ಕಮಿಷನರ್‌ಗೆ ದೂರು ನೀಡಿದ್ದಾರಂತೆ.
ಈ ಹಿನ್ನೆಲೆಯಲ್ಲಿ ವೆಬ್‌ಸೈಟ್ ಮುಚ್ಚುವಂತೆ ಈ ಬಗ್ಗೆ ಹಿಂದು ಜನಜಾಗೃತಿ ಸಮಿತಿಯ ಮಹಿಳಾ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.