Select Your Language

Notifications

webdunia
webdunia
webdunia
webdunia

‘ಅಮೀರ್ ಖಾನ್ ನನ್ನ ಮಗಳಿಗೆ ಈ ರೀತಿ ಮಾಡ್ತಾರೇಂತ ಅಂದುಕೊಂಡಿರಲಿಲ್ಲ’

‘ಅಮೀರ್ ಖಾನ್ ನನ್ನ ಮಗಳಿಗೆ ಈ ರೀತಿ ಮಾಡ್ತಾರೇಂತ ಅಂದುಕೊಂಡಿರಲಿಲ್ಲ’
Mumbai , ಬುಧವಾರ, 30 ನವೆಂಬರ್ 2016 (11:53 IST)
ಮುಂಬೈ: ಹದಿನೆಂಟು ವರ್ಷ ಅವರಿಗಾಗಿ ಅಡುಗೆ ಮಾಡಿ ಹಾಕಿದ್ದರು ನನ್ನ ಮಗಳು. ಅಷ್ಟಾಗಿಯೂ ಹೀಗೆ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಹೀಗೆಂದು ಕಣ್ಣೀರು ಹಾಕಿದ್ದಾರೆ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಮನೆಕೆಲಸದಾಕೆಯ ಅಮ್ಮ.

ಅಷ್ಟಕ್ಕೂ ಅಮೀರ್ ಏನು ಮಾಡಿದರು?  ಕಿರಣ್ ರಾವ್ ಮನೆಯಲ್ಲಿ 80 ಲಕ್ಷ ರೂ. ಮೌಲ್ಯದ ಆಭರಣ ಕಳುವಾದ ವಿಚಾರದಲ್ಲಿ ಪೊಲೀಸರು ಮನೆಯ ಎಲ್ಲಾ ಕೆಲಸಗಾರರನ್ನು ವಿಚಾರಣೆ ನಡೆಸಿದ್ದಾರೆ. ಇವರಲ್ಲಿಪ್ರಧಾನ ಶಂಕಿತರ ಪಟ್ಟಿಯಲ್ಲಿ ಹದಿನೆಂಟು ವರ್ಷದಿಂದ ಅಮೀರ್ ಕುಟುಂಬಕ್ಕೆ ಅಡುಗೆ ಮಾಡಿ ಹಾಕಿದ ಫರ್ಜಾನಾ ಶೇಕ್  ಹಾಗೂ ಮನೆಗೆಲಸದ ಝುಮ್ಕಿ, ಕಿರಣ್ ಸಹಾಯಕಿ ಸುಝಾನಾ ಕೂಡಾ ಸೇರಿದ್ದಾರೆ.

ಇಷ್ಟು ವರ್ಷ ಕೆಲಸ ಮಾಡಿದ ಮೇಲೆಯೂ ನಮ್ಮ ಮೇಲೆ ಅವರಿಗೆ ವಿಶ್ವಾಸವಿಲ್ಲವೇ? ನಮ್ಮನ್ನೂ ಪೊಲೀಸರ ವಿಚಾರಣೆಗೊಳಪಡಿಸಿಬೇಕಿತ್ತಾ ಎನ್ನುವುದು ಶೇಕ್ ಕುಟುಂಬದ ಅಳಲು. ರಂಝಾನ್ ಹಬ್ಬದ ಸಮಯದಲ್ಲೂ ಫರ್ಜಾನಾ ಮನೆಗೆ ಹೋಗುತ್ತಿರಲಿಲ್ಲ. ಇದೇನಾ ಆಕೆಯ ವಿಧೇಯತೆಗೆ ಸಿಕ್ಕ ಪ್ರತಿಫಲ ಎನ್ನುವುದು ಫರ್ಜಾನಾ ಕುಟುಂಬದವರ ಪ್ರಶ್ನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಕ್ ಲೈನ್ ವೆಂಕಟೇಶ್ ಚಿತ್ರದಲ್ಲಿ ಸಲ್ಮಾನ್ ಖಾನ್, ರಜನೀಕಾಂತ್?