Publish Date: Mon, 24 Aug 2026 (13:12 IST)
Updated Date: Mon, 24 Aug 2026 (13:15 IST)
ಮುಂಬೈ: ನಟಿ ಜೆನಿಲಿಯಾ ಪತಿ, ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಬಡ ಬಾಲಕನೊಬ್ಬ ಊಟ ಕೊಡಿ ಎಂದು ಭಿಕ್ಷೆ ಕೇಳಿದಾಗ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳು ಪಬ್ಲಿಕ್ ಆಗಿ ಕಾಣಿಸಿಕೊಂಡಾಗ ಪಪ್ಪಾರಾಜಿಗಳು, ಅಭಿಮಾನಿಗಳು ಮುತ್ತಿಕೊಳ್ಳುವುದು ಸಹಜ. ಕೆಲವೊಮ್ಮೆ ಸೆಲೆಬ್ರಿಟಿಗಳ ಮುಂದೆ ಭಿಕ್ಷುಕರು ಕೈ ಚಾಚಿದ ಪ್ರಸಂಗಗಳೂ ನಡೆದಿವೆ. ಈ ಪೈಕಿ ಕೆಲವರು ಸ್ಪಂದಿಸಿದರೆ ಮತ್ತೆ ಕೆಲವರು ಅವರತ್ತ ತಿರುಗಿಯೂ ನೋಡದಂತೆ ಹೋಗುತ್ತಾರೆ.
ಆದರೆ ರಿತೇಶ್ ತಾವು ಡಿಫರೆಂಟ್ ಎಂದು ನಿರೂಪಿಸಿದ್ದಾರೆ. ಮುಂಬೈನಲ್ಲಿ ತಮ್ಮ ಕಾರು ಏರುವ ವೇಳೆ ಓರ್ವ ಬಡ ಬಾಲಕ ಬಂದು ಊಟ ಕೊಡಿ ಎಂದು ಕೇಳುತ್ತಾನೆ. ಆತನ ಮುಖ ನೋಡಿ ರಿತೇಶ್ ಮನ ಕರಗುತ್ತದೆ. ಆದರೆ ಅವರ ಬಳಿ 100 ರೂ ಕೊಡಲೂ ನಗದು ಇರಲ್ಲ.
ಹೀಗಾಗಿ ಅಲ್ಲಿಯೇ ಇದ್ದ ಪಪ್ಪಾರಾಜಿ ಬಳಿ 100 ರೂ ಪಡೆದು ನೀಡುತ್ತಾರೆ. ಬಳಿಕ ಆ ಪಪ್ಪಾರಾಜಿ ಫೋಟೋ ತೆಗೆದುಕೊಂಡು ನಿಮಗೆ ತಕ್ಷಣವೇ ಹಣ ಪೇಮೆಂಟ್ ಮಾಡುತ್ತೇನೆ ಎಂದು ಭರವಸೆ ನೀಡಿ ಕಾರು ಏರಿ ಹೊರಡುತ್ತಾರೆ. ಬಳಿಕ ಮಾತು ಕೊಟ್ಟಂತೆ ಹಣವನ್ನು ಹಿಂದಿರುಗಿಸುತ್ತಾರೆ ಎನ್ನಲಾಗಿದೆ. ರಿತೇಶ್ ಮಾಡಿದ ಕೆಲಸಕ್ಕೆ ನೆಟ್ಟಿಗರು ಕೊಂಡಾಡಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ