Select Your Language

Notifications

webdunia
webdunia
webdunia
webdunia

ದೀಪಿಕಾಗೆ ವಿನ್ ಡೀಸೆಲ್ ಸಾರ್ವಜನಿಕ ಚುಂಬನ

ದೀಪಿಕಾಗೆ ವಿನ್ ಡೀಸೆಲ್ ಸಾರ್ವಜನಿಕ ಚುಂಬನ
Mumbai , ಶುಕ್ರವಾರ, 13 ಜನವರಿ 2017 (14:28 IST)
ಬಾಲಿವುಡ್ ಹಾಟ್ ಬೆಡಗಿ ದೀಪಿಕಾ ಪಡುಕೋಣೆ ಸದ್ಯಕ್ಕೆ ಹಾಲಿವುಡ್‌ಗೆ ಅಡಿಯಿಟ್ಟಿದ್ದು ಅವರ ಚೊಚ್ಚಲ ಸಿನಿಮಾ xXx : ದಿ ರಿಟರ್ನ್ ಆಫ್ ಕ್ಸೆಂಡರ್ ಕೇಜ್ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. 
 
ಜನವರಿ 14ರಿಂದ ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ನೋಡಬಹುದು. ಚಿತ್ರದ ನಾಯಕ ನಟ ವಿನ್ ಡೀಸೆಲ್ ಸಹ ಭಾರತಕ್ಕೆ ಆಗಮಿಸಿದ್ದು, ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ದೀಪಿಕಾ ಬಗ್ಗೆ ಮಾತನಾಡುತ್ತಾ, ಅವರು ರಾಣಿ, ಅಪ್ಸರೆ ಎಂದು ಹಾಡಿ ಹೊಗಳಿದ್ದಾರೆ.
 
ಕಡೆಗೆ ಹೊಗಳಿಕೆಯ ಭರದಲ್ಲಿ ದೀಪಿಕಾರ ಕೆನ್ನೆಗೆ ಸಾರ್ವಜನಿಕವಾಗಿ ಚುಂಬಿಸಿದರು. ಇದೇನು ಅಂತಹ ಮುಜುಗರದ ಚುಂಬನ ಆಗದಿದ್ದರೂ ದೀಪಿಕಾ ಅಭಿಮಾನಿಗಳಿಗೆ ಒಂಥರಾ ಕಸಿವಿಸಿ ಉಂಟು ಮಾಡಿತು. ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿರುವ ದೀಪಿಕಾ ಅವರ ವರಸೆ ತೆರೆಯ ಮೇಲೆ ಹೇಗಿದೆ ಎಂಬುದು ಕಾದುನೋಡಬೇಕು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

'ಅಲ್ಲಮ' ಸಿನಿಮಾದ ಟ್ರೇಲರ್(ವಿಡಿಯೋ)