ವಿದ್ಯಾ ಬಾಲನ್ ಅಭಿನಯದ ಕಹಾನಿ-2 ಚಿತ್ರಕ್ಕೆ ಡೇಟ್ ಫಿಕ್ಸ್ ಆಗಿದೆ. 25 ನವೆಂಬರ್ 2016ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಫೈನಲ್ ಆಗಿ ಚಿತ್ರ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ ವಿದ್ಯಾ ಬಾಲನ್.
ಈ ಚಿತ್ರ ರಿಲೀಸ್ ಬಗ್ಗೆ ಟ್ವಿಟರ್‌ನಲ್ಲಿ ಚಿತ್ರ ಬಿಡುಗಡೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಕಹಾನಿ -2 ಚಿತ್ರದಲ್ಲಿ ವಿದ್ಯಾ ಬಾಲನ್, ಅರ್ಜುನ್ ರಾಮ್‌ಪಾಲ್, ಸುಜಾಯ್ ಘೋಷ್ ನಟಿಸಿದ್ದಾರೆ.
ಜೀವನವೆಂಬ ಕಹಾನಿಯಲ್ಲಿ ವಿಭಿನ್ನ ಜನರ ಅನುಭವಗಳೇ ನಮಗೆ ಪಾಠ. ಸದ್ಯ ವಿದ್ಯಾ ಬಾಲನ್ ಅಭಿನಯದ ಕಹಾನಿ-2 ಚಿತ್ರ ಇದೇ ಹೇಳಲು ಹೊರಟಿದೆ. ಸದ್ಯ ವಿದ್ಯಾ ಬಾಲನ್ ಕಹಾನಿ-2 ಚಿತ್ರದ ಇದೇ ಹೇಳಲು ಹೊರಟಿದೆ. ಅರ್ಜುನ್ ರಾಮ್ ಪಾಲ್ ಜೊತೆಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿದ್ಯಾ ಬಾಲನ್.
ಕಹಾನಿ-2 ಚಿತ್ರ ಇದೊಂದು ಥ್ರಿಲ್ಲರ್ ಮೂವೀ ಅಂತ ಹೇಳಲಾಗ್ತಿದೆ. ಈ ಚಿತ್ರದಲ್ಲಿ ಗರ್ಭಿಣಿ ಮಹಿಳೆಯ ಕಥೆ ಒಳಗೊಂಡಿರಲಿದೆ. ಮಹಿಳೆ ತನ್ನ ಪತಿ ಕಾಣೆಯಾಗಿರುವ ಕುರಿತು ಪತ್ತೆ ಮಾಡುವುದೇ ಸ್ಟೋರಿಯ ಹಿಂದಿರುವ ಕಥೆ. ಒಬ್ಬ ಗರ್ಭಿಣಿ ಮಹಿಳೆಯ ಕ್ಲಿಷ್ಟ ಪರಿಸ್ಥಿತಿ ಕುರಿತು ಚಿತ್ರದಲ್ಲಿ ಬಿಂಬಿಸಲಾಗಿದೆ.
ಚಿತ್ರದ ಕಥೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹೀಗಾಗಿ ಕಹಾನಿ-2 ಚಿತ್ರದಲ್ಲಿ ವಿದ್ಯಾಳ ಸ್ಥೈರ್ಯವನ್ನ ಮೆಚ್ಚಬಹುದು. ಇನ್ನೂ ಅವರು ಈಗಾಗಲೇ ಕಹಾನಿ-2 ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.
ಇನ್ನೂ ಚಿತ್ರವನ್ನು ಸಂಜಯ್ ಘೋಷ ನಿರ್ದೇಶನ ಮಾಡಿದ್ದಾರೆ..ಮೊದಲ ಬಾರಿಗೆ ಅರ್ಜುನ್ ರಾಮಪಾಲ್ ಹಾಗೂ ವಿದ್ಯಾ ಜೊತೆಯಾಗಿ ನಟಿಸುತ್ತಿರುವುದು ವಿಶೇಷ. ಲೀಡ್ ರೋಲ್‌ನಲ್ಲಿ ಇವರಿಬ್ಬರು ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ರಾಮಪಾಲ್- ವಿದ್ಯಾ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ನೋಡುವ ಅವಕಾಶ ದೊರಕಿದೆ.