ಜಯಾ ಬಚ್ಚನ್ ಸರಳತೆ, ಪರಿಶುದ್ಧತೆಯ ಸಾಕಾರರೂಪ ಎಂದು ಹೇಳಿದ್ದಾರೆ ವಿದ್ಯಾ. 68 ವರ್ಷದ ಜಯಾ ಬಚ್ಚನ್ ಅವರ ಸರಳತೆ, ಪರಿಶುದ್ಧತೆ, ಹಾಗೂ ಪಾರದರ್ಶಕತೆ ನನಗೆ ಇಷ್ಟ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ವಿದ್ಯಾ ಬಾಲನ್ ಜಯಾ ಬಚ್ಚನ್ ಕುರಿತು ಪ್ರಶಂಸೆ ನೀಡಿದ್ದಾರೆ. ಜಯಾ ಬಚ್ಚನ್ ಅವರ ಅಭಿಮಾನ ಚಿತ್ರವನ್ನು 9 ಸಲ ವೀಕ್ಷಿಸಿದ್ದಾರಂತೆ ವಿದ್ಯಾ.. ಈ ಚಿತ್ರದಲ್ಲಿ ಜಯಾ ಬಿಳಿ ಬಣ್ಣದ ಸೀರೆಯಲ್ಲಿ ಅವರ ಸರಳತೆ, ಪರಿಶುದ್ಧತೆ, ಹಾಗೂ ಅವರ ಅಭಿನಯ ವಿದ್ಯಾಗೆ ಇಷ್ಟವಾಗಿದೆ ಎಂದು ವಿದ್ಯಾ ಟ್ವೀಟ್ ಮಾಡಿದ್ದಾರೆ.
ಅಲ್ಲದೇ ವಿದ್ಯಾ 2015ರಲ್ಲಿ ನಟಿಸಿದ್ದ ಹಮಾರಿ ಅಧುರಿ ಕಹಾನಿ ಚಿತ್ರದ ಮ್ಯೂಸಿಕ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೃಶಿಕೇಶ್ ಮುಖರ್ಜಿ ಜತೆ ಕೆಲಸ ಮಾಡಿದ್ದು ಖುಷಿ ತಂದಿದೆ.
ಅವರ ಚಿತ್ರಗಳು ನನ್ನ ಫೇವರಿಟ್ ಆಗಿದ್ದು, ಅವರ ಅಭಿಮಾನ್, ಆನಂದ ಹಾಗೂ ಗೋಲ್‌ಮಾಲ್ ಚಿತ್ರಗಳ ಬಗ್ಗೆ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಇನ್ನೂ ವಿದ್ಯಾ ಕಹಾನಿ-2 ಚಿತ್ರದಲ್ಲಿ ನಟಿಸುತ್ತಿದ್ದಾರೆ..
ಇನ್ನೂ ವಿದ್ಯಾ ಬಾಲನ್ ಅಭಿನಯದ ಕಹಾನಿ-2 ಚಿತ್ರಕ್ಕೆ ಡೇಟ್ ಫಿಕ್ಸ್ ಆಗಿದೆ. 25 ನವೆಂಬರ್ 2016ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರದಲ್ಲಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ ವಿದ್ಯಾ ಬಾಲನ್.
ಕಹಾನಿ-2 ಚಿತ್ರ ಇದೊಂದು ಥ್ರಿಲ್ಲರ್ ಮೂವೀ ಅಂತ ಹೇಳಲಾಗ್ತಿದೆ. ಈ ಚಿತ್ರದಲ್ಲಿ ಗರ್ಭಿಣಿ ಮಹಿಳೆಯ ಕಥೆ ಒಳಗೊಂಡಿರಲಿದೆ. ಮಹಿಳೆ ತನ್ನ ಪತಿ ಕಾಣೆಯಾಗಿರುವ ಕುರಿತು ಪತ್ತೆ ಮಾಡುವುದೇ ಸ್ಟೋರಿಯ ಹಿಂದಿರುವ ಕಥೆ. ಒಬ್ಬ ಗರ್ಭಿಣಿ ಮಹಿಳೆಯ ಕ್ಲಿಷ್ಟ ಪರಿಸ್ಥಿತಿ ಕುರಿತು ಚಿತ್ರದಲ್ಲಿ ಬಿಂಬಿಸಲಾಗಿದೆ.
ಚಿತ್ರದ ಕಥೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಹೀಗಾಗಿ ಕಹಾನಿ-2 ಚಿತ್ರದಲ್ಲಿ ವಿದ್ಯಾಳ ಸ್ಥೈರ್ಯವನ್ನ ಮೆಚ್ಚಬಹುದು. ಇನ್ನೂ ಅವರು ಈಗಾಗಲೇ ಕಹಾನಿ-2 ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.