ಅಭಿಮಾನಿಗಳು ಸದ್ಯ ಕಾಯುತ್ತಿರುವ ಸಿನಿಮಾಗಳಲ್ಲಿ ಒಂದು ಸುದೀಪ್ ಅಭಿನಯದ ಕೋಟಿಗೊಬ್ಬ-2. ಈ ಸಿನಿಮಾ ಯಾವಾಗ ಬರುತ್ತೆ ಅಂತಾ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ.ಅದರಲ್ಲೂ ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ಗಳು ಸಿನಿಮಾದ ಕುರಿತಾದ ಕಾತುರತೆಯನ್ನು ಇನ್ನಷ್ಟು ಹೆಚ್ಚು ಮಾಡಿವೆ.
ಇನ್ನು ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಬಹುದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಸಿನಿಮಾ ತಂಡ ಸಂತೋಷದ ಸುದ್ದಿಯೊಂದನ್ನು ನೀಡಿದೆ. ವರಮಹಾಲಕ್ಷ್ಮಿಯ ಹಬ್ಬದಂದು ಅಂದ್ರೆ ಆಗಸ್ಟ್ 12ರಂದು ಕೋಟಿಗೊಬ್ಬ-2 ಸಿನಿಮಾ ಬಿಡುಗಡೆಯಾಗುತ್ತಂತೆ. ಅಂದ್ಹಾಗೆ ಕೋಟಿಗೊಬ್ಬ -2 ಈಗಾಗಲೇ ಬಿಡುಗಡೆಯಾಗಬೇಕಿತ್ತು.
ಆದರೆ, ರಜನಿಕಾಂತ್ ಅಭಿನಯದ `ಕಬಾಲಿ' ಚಿತ್ರ ಬಿಡುಗಡೆಗೆ ಸಜ್ಜಾಗಿದ್ದರಿಂದ, ಕೋಟಿಗೊಬ್ಬ -2' ರಿಲೀಸ್ ಡೇಟ್ ಫಿಕ್ಸ್ ಮಾಡುವುದಾಗಿ ನಿರ್ಮಾಪಕ ಸೂರಪ್ಪ ಬಾಬು ಈ ಮೊದಲು ಹೇಳಿಕೊಂಡಿದ್ದರು.
ಈಗ `ಕಬಾಲಿ' ಚಿತ್ರವು ಜುಲೈ 22ರಂದು ಬಿಡುಗಡೆಯಾಗುತ್ತಿದೆ. ಆ ಚಿತ್ರ ಸಾಕಷ್ಟು ಚಿತ್ರಮಂದಿರಗಳನ್ನು ಬ್ಲಾಕ್ ಮಾಡಿರುವುದರಿಂದ, ಆ ಚಿತ್ರ ಬಿಡುಗಡೆಯಾಗಿ 15 ದಿನಗಳ ನಂತರ `ಕೋಟಿಗೊಬ್ಬ 2' ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.
ಅಂದ್ಹಾಗೆ ಈ ಸಿನಿಮಾದಲ್ಲಿ ಸುದೀಪ್ ಅವರಿಗ ನಾಯಕಿಯಾಗಿ ಮೊದಲ ಬಾರಿಗೆ ನಿತ್ಯಾ ಮೆನನ್ ಅವರು ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸಿನಿಮಾದಲ್ಲಿ ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್ ರೈ, ಮುಕೇಶ್ ತಿವಾರಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಕೆ.ಎಸ್. ರವಿಕುಮಾರ್ ನಿರ್ದೇಶಿಸಿದ್ದಾರೆ. ಡಿ. ಇಮಾನ್ ಅವರ ಸಂಗೀತ ಮತ್ತು ರಾಜರತ್ನಂ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ