Select Your Language

Notifications

webdunia
webdunia
webdunia
webdunia

ಕಲ್ಪನಾ-2 ಶೂಟಿಂಗ್ ವೇಳೆ ಉಪ್ಪಿಗೆ ಗಾಯ

Upendra
ಬೆಂಗಳೂರು , ಸೋಮವಾರ, 9 ಮೇ 2016 (17:25 IST)
ನಟ ಉಪೇಂದ್ರ ಕಲ್ಪನಾ -2 ಚಿತ್ರದ ಶೂಟಿಂಗ್ ವೇಳೆ ಗಾಯ ಮಾಡಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ಶೂಟಿಂಗ್ ಮಾಡಲಾಗ್ತಿತ್ತು. ಆ ವೇಳೆ ಉಪೇಂದ್ರ ಅವರ ಕಾಲಿನ ಭಾಗಕ್ಕೆ ಗಾಯವಾಗಿದೆ. 
ಶುಕ್ರವಾರ ಮಲ್ಲೇಶ್ವರಂನ ಪ್ಲೇ ಗ್ರೌಂಡ್ ವೇಳೆ ಶೂಟಿಂಗ್ ನಡೆಸಲಾಗಿತ್ತು. ಈ ವೇಳೆ ಉಪೇಂದ್ರ ಕಾಲಿಗೆ ಪೆಟ್ಟಾಯ್ತು. ತುರ್ತಾಗಿ ಮೆಡಿಕಲ್ ಚಿಕಿತ್ಸೆ ನೀಡಲಾಯ್ತು.
 
ಉಪೇಂದ್ರ ಹಾಗೂ ಅನಂತ ರಾಜ್ ಇಬ್ಬರು ಸೇರಿ ಕಬ್ಬಡ್ಡಿ ಆಟ ವಾಡುತ್ತಿದ್ದರು.. ಈ ವೇಳೆ ಉಪೇಂದ್ರ ಅವರಿಗೆ ಕಾಲಿನ ಭಾಗಕ್ಕೆ ಪೆಟ್ಟಾಗಿದ್ದು, ಉಪೇಂದ್ರ ಮತ್ತೆ ಶೂಟಿಂಗ್‌ನಲ್ಲಿ ತೊಡಗಿಕೊಂಡರು.
 
ಕಲ್ಪನಾ-2 ಚಿತ್ರ ತಮಿಳು ಚಿತ್ರದ ರಿಮೇಕ್ ಆಗಿದ್ದು, ಹಾರರ್ -ಕಾಮಿಡಿ ಸಿರೀಸ್ ಆಗಿರೋ ಚಿತ್ರವನ್ನು ರಿಮೇಕ್ ಮಾಡಲಾಗಿದೆ. ಕನ್ನಡದಲ್ಲಿ  ತಯಾರಾಗುತ್ತಿರೋ ಕಲ್ಪನಾ ಚಿತ್ರದಲ್ಲಿ ಉಪೇಂದ್ರ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನಂತ ರಾಜ್ ಕಲ್ಪನಾ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾ ಮಣಿ ಹಾಗೂ ಅವಂತಿಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಗಡವಾಗಿ 32 ಕೋಟಿ ತೆರಿಗೆ ಪಾವತಿಸಿದ ಸಲ್ಮಾನ್