ಸ್ಯಾಂಡಲ್‌ವುಡ್ ನಟಿ ರಾಗಿಣಿ ಸುದ್ದಿಯಲ್ಲೇ ಇರುವ ನಟಿ. ಮೊನ್ನೆ ರಾಗಿಣಿ ಸಖತ್ ಸ್ಲಿಮ್ ಆಗಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆಗಳಲ್ಲಿ ಕೇಳಿ ಬಂದಿತ್ತು. ಇದೀಗ ತುಪ್ಪದ ನಟಿ ರಾಗಿಣಿ ಐಟಂ ಸಾಂಗ್ ನಲ್ಲಿ ಹಾಟ್ ಹಾಟ್ ಆಗಿ ಸ್ಟೆಪ್ ಹಾಕಿದ್ದಾರೆ.
'ಗೋಲಿಸೋಡ 'ಚಿತ್ರದಲ್ಲಿ ರಾಗಿಣಿ ದ್ವಿವೇದಿ ಮಿಂಚಲಿದ್ದಾರೆ. ವಿಶೇಷವೆಂದ್ರೆ ಇವರ ಜತೆಗೆ ಸಾಧುಕೋಕಿಲ ಹಿರೋ. 'ಗೋಲಿಸೋಡ'ದಲ್ಲಿ ರಾಗಿಣಿ ಐಟಂ ಸಾಂಗ್‍ಗೆ ಸಖತ್ ಆಗೇ ಡ್ಯಾನ್ಸ್ ಮಾಡಿದ್ದಾರೆ.
ಅಂದಹಾಗೆ ರಾಗಿಣಿ ಸ್ಟೆಪ್ ಹಾಕಿರೋದು ಇದೇ ಮೊದಲೇನಲ್ಲ. 'ಕಳ್ಳ ಮಳ್ಳ ಸುಳ್ಳ' ಚಿತ್ರವೊಂದರಲ್ಲಿ 'ತುಪ್ಪ ಬೇಕಾ ತುಪ್ಪ' ಎಂದು ಕುಣಿದಿದ್ದರು. ಈ ಮೂಲಕ ಸಿನಿ ರಸಿಕರ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು.
ಮತ್ತೀಗ ಐಟಂ ಸಾಂಗ್‌ನಲ್ಲಿ ರಾಗಿಣಿ ಮಿಂಚಲಿದ್ದಾರೆ. ಹಾಟ್ ಆಗಿ ಸ್ಟೆಪ್ ಹಾಕಿದ್ದಾರೆ.ಗೋಲಿಸೋಡಾದ 'ರಂಗು ರಂಗು ರಂಗೀಲಾ, ಪಡ್ಡೆ ಹುಡುಗರ ನಾನೇ ಥೌಂಸೆಡ್‌ವಾಲಾ, ಚಿಕ್ಕಬಳ್ಳಾಪುರದಿಂದ ಓಡಿ ಬಂದ್ರೆ ಸಿಂಡ್ರೆಲ ಎಂಬ ಹಾಡಿಗೆ ಕುಣಿದಿದ್ದಾರೆ. ಇನ್ನೂ ನಟ ಸಾಧು ಕೋಕಿಲಾ ಜತೆಗೆ ರಾಗಿಣಿ ದ್ವಿವೇದಿ ಅಭಿನಯಿಸುತ್ತಿರುವುದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ