Select Your Language

Notifications

webdunia
webdunia
webdunia
webdunia

ಇಂದು ಬಾಹುಬಲಿ ಸಿನಿಮಾ ಬಿಡುಗಡೆ!

ಇಂದು ಬಾಹುಬಲಿ ಸಿನಿಮಾ ಬಿಡುಗಡೆ!
Hyderabad , ಶುಕ್ರವಾರ, 7 ಏಪ್ರಿಲ್ 2017 (10:22 IST)
ಹೈದರಾಬಾದ್: ಬಾಹುಬಲಿ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ! ಅರೆ.. ಇದೇನು ಬಾಹುಬಲಿ 2 ಇಂದೇ ಬಿಡುಗಡೆಯಾಗುತ್ತಿದೆಯಾ ಎಂದು ಅಚ್ಚರಿಗೊಳ್ಳಬೇಡಿ!

 

ಇಂದು ಬಿಡುಗಡೆಯಾಗುತ್ತಿರುವುದು ಬಾಹುಬಲಿ ಭಾಗ 1 ಸಿನಿಮಾ. ಮತ್ತೊಮ್ಮೆ ರಿ ರಿಲೀಸ್ ಆಗುತ್ತಿದೆ. ಅದೂ 1000 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಏಪ್ರಿಲ್ ಕೊನೆಯಲ್ಲಿ ಬಾಹುಬಲಿ 2 ಸಿನಿಮಾ ರಿಲೀಸ್ ಆಗಲಿದೆ. ಅದಕ್ಕಿಂತಲೂ ಮೊದಲೇ ಭಾಗ 1 ರಿ ರಿಲೀಸ್ ಆಗುತ್ತಿದೆ.

 
ಹಿಂದಿ ಅವತರಣಿಕೆಯನ್ನು ಕರಣ್ ಜೋಹರ್ ರಿ ರಿಲೀಸ್ ಮಾಡುತ್ತಿದ್ದು, ಈ ವಿಷಯವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ. ಮೊದಲ ಬಾರಿ ಬಿಡುಗಡೆಯಾದಾಗ ಕೋಟಿಗಟ್ಟಲೆ ಬಾಚಿಕೊಂಡಿದ್ದ ಸಿನಿಮಾ ರಿ ರಿಲೀಸ್ ಆಗುವುದರಿಂದ ಎಷ್ಟು ಲಾಭ ತಂದುಕೊಡುತ್ತದೆ ನೋಡಬೇಕಿದೆ. ಅಂತಿಮ ಭಾಗ ಏಪ್ರಿಲ್ 28 ಕ್ಕೆ ಬಿಡುಗಡೆಯಾಗಲಿದ್ದು, ಅದಕ್ಕಿಂತಲೂ ಮೊದಲೇ ಅಭಿಮಾನಿಗಳಲ್ಲಿ ಬಾಹುಬಲಿ ಕ್ರೇಜ್ ಹುಟ್ಟಿಸಲು ಈ ಪ್ರಯತ್ನ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣವೀರ್ ಸಿಂಗ್ ಜತೆ ಸಚಿನ್ ತೆಂಡುಲ್ಕರ್ ಪುತ್ರಿ ಓಡಾಟ!