Webdunia - Bharat's app for daily news and videos

Install App

ತಿಥಿ ಸಿನಿಮಾಗೆ ಫಿದಾ ಆದ ಬಾಲಿವುಡ್ ನಟ ನಟಿಯರು

Webdunia
ಶುಕ್ರವಾರ, 27 ಮೇ 2016 (10:41 IST)
ತಿಥಿ ಸಿನಿಮಾ. ವಿಶ್ವಮಟ್ಟದಲ್ಲಿ ಕನ್ನಡದ ಕಂಪನ್ನು ಹರಡಿದ ಸಿನಿಮಾ.ಅಂತರರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿರುವ ಈ ಸಿನಿಮಾ ಅನೇಕರ ಮೆಚ್ಚುಗೆ ಗಳಿಸಿದೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನ ಖ್ಯಾತನಾಮ ಕಲಾವಿದರು ಸಿನಿಮಾವನ್ನು ನೋಡಿ ವ್ಹಾ! ಅಂದಿದ್ದರು. ಇದೀಗ ಇನ್ನು ಕೆಲ ಬಾಲಿವುಡ್ ಕಲಾವಿದರು ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. 
ಕನ್ನಡ ತಿಥಿ ಸಿನಿಮಾ ಮುಂದಿನ ತಿಂಗಳು ಅಂದ್ರೆ ಜೂನ್ 3 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ರಿಲೀಸ್ ಆಗಿರುವ ಈ ಸಿನಿಮಾವನ್ನು ನೋಡೋದಕ್ಕೆ ಬೇರೆ ಬೇರೆ  ಭಾಷೆಯ ಮಂದಿ ಕುತೂಹಲದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಬಾಲಿವುಡ್ ಕೆಲ ನಟ ನಟಿಯರು ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 
ನಟಿ ಕಲ್ಕಿ ಕೊಚ್ಲಿನ್, ಉಡ್ತಾ ಪಂಜಾಬ್ ಸಿನಿಮಾ ನಿರ್ದೇಶಕರಾದ ಅಭಿಷೇಕ್ ಚೌಬೆ, ಸಂಭಾಷಣೆಕಾರ ವರುಣ್ ಗ್ರೋವರ್, ನಟ ಮಾನವ್ ಕೌಲ್ ಮುಂತಾದವರು ತಿಥಿ ಸಿನಿಮಾವನ್ನು ವೀಕ್ಷಿಸಿದ್ದಾರಂತೆ. ಮುಂಬೈನಲ್ಲಿ ನಡೆದ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ಇವರೆಲ್ಲಾ ಸಿನಿಮಾವನ್ನು ವೀಕ್ಷಿಸಿದ್ರು.ಈ ಸಿನಿಮಾ ಮುಂದಿನ ತಿಂಗಳು ವಿಶ್ವವಾದ್ಯಂತ ರಿಲೀಸ್ ಆಗುತ್ತಿದೆ.
 
 ತಿಥಿ ಈಗಾಗಲೇ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಅಲ್ಲದೇ ರಾಜ್ಯ ಪ್ರಶಸ್ತಿಯನ್ನೂ ಗೆದ್ದುಕೊಂಡಿದೆ. ಇನ್ನು ಈ ಸಿನಿಮಾವನ್ನು ನೋಡಿದ ನಟಿ ಕಲ್ಕಿ ಇದೊಂದು ಉತ್ತಮ ಸಿನಿಮಾ. ನನಗೆ ಕನ್ನಡ ಅರ್ಥವಾಗೋದಿಲ್ಲ. ಹಾಗಾಗಿ ನನಗೆ ಅದರಲ್ಲಿನ ಹಾಸ್ಯ ಸನ್ನಿವೇಶ ಅರ್ಥವಾಗಲಿಲ್ಲ. ಆದ್ರೆ ಕಥೆ ಗೊತ್ತಾಯಿತು. ಇದೊಂದು ಅದ್ಭುತವಾದ ಸಿನಿಮಾ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments