Publish Date: Thu, 09 Aug 2018 (06:57 IST)
Updated Date: Thu, 09 Aug 2018 (06:59 IST)
ಮುಂಬೈ: ಬಾಲಿವುಡ್ ನ ಸ್ಟಾರ್ ನಟ ಶಾರೂಕ್ ಖಾನ್ ತಮ್ಮ ಮಕ್ಕಳನ್ನು ತಾನು ನಡೆದ ಹಾದಿಯಲ್ಲೇ ಬೆಳೆಸಿದ್ದಾರೆ. ಅಪ್ಪನಂತೆ ಅವರ ಮಗ ಕೂಡ ಸಹಾಯ ಮಾಡುವ ಗುಣ ಬೆಳೆಸಿಕೊಂಡಿದ್ದಾನೆ.
ಶಾರೂಕ್ ಖಾನ್ ಮಗ ಆರ್ಯನ್ ತನ್ನ ಸ್ನೇಹಿತರೊಂದಿಗೆ ಮುಂಬೈನಲ್ಲಿ ಪಾರ್ಟಿ ಮಾಡ್ತಾ ಇದ್ದರು. ಪಾರ್ಟಿ ಮುಗಿದು ಹೊರಗೆ ಬರುತ್ತಿದ್ದಂತೆ ಮಾಧ್ಯಮದವರು ಆರ್ಯನ್ ಅವರನ್ನು ಮುತ್ತಿಕೊಂಡರು ಆದರೆ . ಆರ್ಯನ್ ಇದನ್ನೆಲ್ಲಾ ಲೆಕ್ಕಿಸದೆ, ತಮ್ಮ ಕಾರ್ ಬಳಿ ಬಂದ್ರು. ಆಗ ಒಬ್ಬ ಮಹಿಳೆ, ಮಗುವಿನೊಂದಿಗೆ ಬಂದು ಭಿಕ್ಷೆ ಬೇಡಿದಳು. ಮಗುವನ್ನು ಕಂಡು ತನ್ನ ಜೇಬಿನಲ್ಲಿದ್ದ ಹಣವನ್ನು ಮಗುವಿಗೆ ನೀಡಿ ಆರ್ಯನ್ ಕಾರು ಹತ್ತಿದ್ದಾರೆ.
ಅಭಿಮಾನಿಯೊಬ್ಬ ಶಾರೂಕ್ ಮಗ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಕೂಡ ಮಾಡಿದ್ದಾನೆ. ಇದನ್ನು ಕಂಡು ಶಾರೂಕ್ ಅಭಿಮಾನಿಗಳು ಫುಲ್ ಖುಷ್ ಆಗಿ , ಹಳೆಯ ವಿಡಿಯೋವನ್ನು ಜೋಡಿಸಿ ಹಾಕಿ ತಂದೆಯ ನೆರಳಲ್ಲಿ ಮಗನ ಹೆಜ್ಜೆ ಎಂಬ ಎಂದು ಬರೆದಿದ್ದಾರೆ. ಶಾರುಕ್ ಖಾನ್ ನಂತೆ ಅವರ ಮಗ ಕೂಡ ಏನೂ ಕಡಿಮೆ ಇಲ್ಲ ಬಿಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ