Select Your Language

Notifications

webdunia
webdunia
webdunia
webdunia

ಹಾಲಿವುಡ್ ನಿಂದ ಬಂದ ಅವಕಾಶವನ್ನು ನಟಿ ದೀಪಿಕಾ ಪಡುಕೋಣೆ ತಿರಸ್ಕರಿಸಿರುವುದಕ್ಕೆ ಕಾರಣ ಇದಂತೆ!

ಹಾಲಿವುಡ್ ನಿಂದ ಬಂದ ಅವಕಾಶವನ್ನು ನಟಿ ದೀಪಿಕಾ ಪಡುಕೋಣೆ ತಿರಸ್ಕರಿಸಿರುವುದಕ್ಕೆ ಕಾರಣ ಇದಂತೆ!
ಮುಂಬೈ , ಮಂಗಳವಾರ, 13 ಮಾರ್ಚ್ 2018 (07:04 IST)
ಮುಂಬೈ : ಬಾರಿ ವಿರೋಧಗಳ ನಡುವೆ ತೆರೆಕಂಡ ಪದ್ಮಾವತಿ ಚಿತ್ರದ ನಂತರ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರಿಗೆ ಆಫರ್ ಗಳ ಸುರಿಮಳೆ ಹರಿದುಬರುತ್ತಿದ್ದು, ಈಗಾಗಲೇ ಅವರು ಹಾಲಿವುಡ್ ನ ಚಿತ್ರವೊಂದರಲ್ಲಿಯೂ ಕೂಡ ನಟಿಸಿದ್ದರು. ಆದರೆ ಇತ್ತಿಚೆಗೆ ಅವರು ಹಾಲಿವುಡ್ ನಿಂದ ಬಂದ ಅವಕಾಶವೊಂದನ್ನು ತಿರಸ್ಕರಿಸಿದ್ದಾರಂತೆ.


ಕರಸೊ ನಿರ್ದೇಶನದ ‘xXx: Return of Xander Cage' ಚಿತ್ರ ದೀಪಿಕಾ ಪಡುಕೋಣೆ ಅವರು ನಟಿಸಿದ ಮೊದಲ ಹಾಲಿವುಡ್ ಚಿತ್ರವಾಗಿದ್ದು, ಇದರಲ್ಲಿ ವಿನ್ ಡೀಸೆಲ್ ಅವರು ನಾಯಕನಾಗಿ ನಟಿಸಿದ್ದರು. ಆದರೆ ಈ ಚಿತ್ರಕ್ಕೆ ಚೀನಾ ದೇಶದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅಮೆರಿಕಾದಲ್ಲಿ ಮಾತ್ರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಹಾಗೇ ಬಾಕ್ಸ್ ಆಫೀಸ್‌ನಲ್ಲಿಯೂ ಕೂಡ ಹಣ ಗಳಿಸಿರಲಿಲ್ಲ. ಇದು ದೀಪಿಕಾ ಅವರಿಗೆ ಬೇಸರವನ್ನುಂಟುಮಾಡಿತ್ತು.


ಆದರೆ ಇದೀಗ ನಿರ್ದೇಶಕ ಕರಸೊ ಅವರು  ' xXx: Return of Xander Cage' ಚಿತ್ರದ ಸಿಕ್ವೇಲ್ ತೆಗೆಯಲು ಹೊರಟಿದ್ದು, ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಅವರೇ ನಾಯಕಿಯಾಗಬೇಕೆಂದು ಅವರು ಬಯಸಿದ್ದಾರಂತೆ. ಆದರೆ ದೀಪಿಕಾ ಅವರು ಮಾತ್ರ ಇಲ್ಲಿಯ ತನಕ ಇದಕ್ಕೆ ಒಪ್ಪಿಗೆ ನೀಡಲಿಲ್ಲವಂತೆ. ಈ ಬಗ್ಗೆ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇರ್ಫಾನ್ ಖಾನ್ ಅವರಿಗೆ ಬಂದಿರುವ ಕಾಯಿಲೆ ಕ್ಯಾನ್ಸರ್ ಎಂಬ ಗಾಳಿ ಸುದ್ಧಿಗೆ ವೈದ್ಯರು ಹೇಳಿದ್ದೇನು?