ನಟ ಅಕ್ಷಯ್ ಕುಮಾರ್ ಹೇಳುವಂತೆ ಅವರ ಮುಂಬರುವ ಚಿತ್ರ ಮಹಿಳೆಯರಿಗೆ ತುಂಬಾ ಇಷ್ಟವಾಗಲಿದೆಯಂತೆ. ಯಾಕೆಂದ್ರೆ ಈ ಚಿತ್ರ ವಿಭಿನ್ನ ಕಥಾ ಹಂದರ ಹೊಂದಿದ್ದು, ಮದುವೆ ಸಂಬಂಧವನ್ನು ಕಾಯ್ದುಕೊಂಡು ಬರಲು ಹಾಗೂ ವಿಚ್ಛೇದನೆಯಂತಹ ಸಮಸ್ಯೆಗಳನ್ನು ತಡೆಯುವಲ್ಲಿ 'ರುಸ್ತುಮ್' ಚಿತ್ರ ಮಹತ್ವದ ಪಾತ್ರ ವಹಿಸಲಿದೆಯಂತೆ.
ಅಕ್ಕಿ ಹೇಳುವಂತೆ ಸಿನಿಮಾದ ಕಥೆ ತುಂಬಾ ವಿಭಿನ್ನವಾಗಿದೆ. ಇದೊಂದು ವಾಸ್ತವಿಕ ಕಥಾ ಹಂದರ ಹೊಂದಿದೆ ಎಂದು ಅಕ್ಷಯ್ ತಿಳಿಸಿದ್ದಾರೆ.. ಇದೇ ಮೊದಲ ಬಾರಿಗೆ ಅವರು ನೌಕಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಚಿತ್ರಿದಿಂದ ನೀವೂ ಏನು ತೆಗೆದುಕೊಳ್ಳಲು ಬಯಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,
ಚಿತ್ರದಲ್ಲಿ ನಾನು ಧರಿಸಿದ್ದ ಯೂನಿಪಾರ್ಮ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಅಕ್ಷಯ್ ಸಂತೋಷದಿಂದ ಹೇಳಿಕೊಂಡಿದ್ದಾರೆ. ಇನ್ನೂ ಈ ಚಿತ್ರ ಮದುವೆ ಸಂಬಂಧಗಳನ್ನು ಉಳಿಸುತ್ತದೆಯಲ್ಲದೇ, ತಲಾಕ್ ನೀಡುವುದನ್ನು ತಡೆಗಟ್ಟುತ್ತದೆ ಎಂದು ಇದೇ ವೇಳೆ ತಿಳಿಸಿದರು.
ಶೀಘ್ರದಲ್ಲೇ ರುಸ್ತುಮ್ ಚಿತ್ರ ತೆರೆ ಕಾಣಲಿದ್ದು, ಅಗಸ್ಟ್ 12ರಂದು ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಹೊಸ ಅವತಾರದಲ್ಲಿ ಅಕ್ಷಯ್ ಮಿಂಚಿದ್ದಾರೆ. ಸಖತ್ ಹ್ಯಾಂಡ್‌ಸಮ್ ಆಗಿ ಮಿಂಚಿರುವ ಅಕ್ಕಿ ನೌಕಾಸೇನೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅಕ್ಷಯ್ ಈ ಹಿಂದೆ ತಮ್ಮ ಪಾತ್ರದ ಬಗ್ಗೆ ಟ್ವಿಟ್ ಮಾಡಿದ್ದರು. ಚಿತ್ರದಲ್ಲಿ ಅಧಿಕಾರಿಯ ಪಾತ್ರದಲ್ಲಿ ಅಕ್ಷಯ್‌ರನ್ನು ನೋಡಲು ಅವರ ಅಭಿಮಾನಿಗಳ ಕಾತುರದಲ್ಲಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ