Select Your Language

Notifications

webdunia
webdunia
webdunia
webdunia

ತಮನ್ನಾ ಕಲರ್ ಕಾರಣ ಕೆಲವೊಂದು ಅವಕಾಶಗಳು ಮಿಸ್

ತಮನ್ನಾ ಕಲರ್ ಕಾರಣ ಕೆಲವೊಂದು ಅವಕಾಶಗಳು ಮಿಸ್
Hyderabad , ಸೋಮವಾರ, 16 ಜನವರಿ 2017 (11:31 IST)
ಮುಟ್ಟಿದರೆ ಮುನಿ ತರಹ ಇರುವ ಬೆಡಗಿ ತಮನ್ನಾ. ಇಷ್ಟೆಲ್ಲಾ ಅಂದಚೆಂದಗಳಿರುವ ಈ ಬೆಡಗಿಗೆ ತನ್ನ ಸೌಂದರ್ಯವೇ ಒಮ್ಮೊಮ್ಮೆ ಮುಳುವಾಗುತ್ತಿವೆಯಂತೆ. ಮಿಲ್ಕಿ ಬ್ಯೂಟಿ ಎಂದು ಕರೆಸಿಕೊಂಡಿರುವ ತಮನ್ನಾ ಸಕ್ಸಸ್‌ಗೆ ಆಕೆಯ ಬಣ್ಣವೇ ಕಾರಣ ಎನ್ನಲಾಗಿದೆ. 
 
ಈ ಗೌರವ ವರ್ಣದ ಕಾರಣಕ್ಕೆ ಕೆಲವೊಂದು ಚಾನ್ಸ್ ಮಿಸ್ ಆಗಿದ್ದಾರಂತೆ ತಮನ್ನಾ. ಶೀಘ್ರದಲ್ಲೇ ಶಿಂಬು ಜೊತೆ ಅಭಿನಯಿಸುತ್ತಿದ್ದು ತಮಿಳು ಪ್ರೇಕ್ಷಕರ ಮುಂದೆ ಬರಲಿದ್ದಾರೆ ತಮನ್ನಾ. ಆದರೆ ತಮಿಳಿಗರ ಮನಗೆಲ್ಲಲು ತಮ್ಮ ಅಸಲಿ ಬಣ್ಣವನ್ನು ಸ್ವಲ್ಪ ಕಡಿಮೆ ಮಾಡಿಕೊಂಡಿದ್ದರಂತೆ ತಮನ್ನಾ.
 
ಇದರ ಜೊತೆಗೆ ಕೆಲವೊಂದು ಚಿತ್ರಗಳಲ್ಲೂ ತಮ್ಮ ಬಣ್ಣವನ್ನು ಮರೆಮಾಚಿಕೊಳ್ಳಬೇಕಾಯಿತಂತೆ. ಮುಖ್ಯವಾಗಿ ಬ್ಲಾಕ್ ಬಸ್ಟರ್ ಸಿನಿಮಾ ಬಾಹುಬಲಿಯಲ್ಲೂ ತಮ್ಮ ಬಣ್ಣ ಡಲ್ ಆಗಿ ಕಾಣುವಂತೆ ಮಾಡಿಕೊಂಡಿದ್ದರಂತೆ. ಇನ್ನೊಂದು ಸಿನಿಮಾ ಹೆಸರನ್ನು ತಮನ್ನಾ ಹೇಳಿಲ್ಲ.  ಒಟ್ಟಾರೆ ಹಾಲುಬಣ್ಣದ ಬೆಡಗಿಗೆ ತನ್ನ ಬಣ್ಣವೇ ಒಂಥರಾ ವರ ಮತ್ತು ಶಾಪ ಎರಡೂ ಆಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಣಿರತ್ನಂ ಸಿನಿಮಾ ಮೇಲೆ ಅದಿತಿ ರಾವ್ ಆಸಕ್ತಿ