Select Your Language

Notifications

webdunia
webdunia
webdunia
webdunia

ಮಣಿರತ್ನಂ ಸಿನಿಮಾ ಮೇಲೆ ಅದಿತಿ ರಾವ್ ಆಸಕ್ತಿ

ಮಣಿರತ್ನಂ ಸಿನಿಮಾ ಮೇಲೆ ಅದಿತಿ ರಾವ್ ಆಸಕ್ತಿ
Mumbai , ಸೋಮವಾರ, 16 ಜನವರಿ 2017 (11:22 IST)
ಬಾಲಿವುಡ್‌ನಲ್ಲಿ ಸಾಕಷ್ಟು ವರ್ಷಗಳಿಂದ ಇದ್ದರೂ ಒಳ್ಳೇ ಬ್ರೇಕ್ ಸಿಗಲಿಲ್ಲ ಹೈದರಾಬಾದ್ ಮೂಲದ ಬೆಡಗಿ ಅದಿತಿ ರಾವ್ ಹೈದರಿಗೆ. ಸದ್ಯಕ್ಕೆ ಮಣಿರತ್ನಂ ಮತ್ತು ಕಾರ್ತಿ ಕಾಂಬಿನೇಷನ್‌ನ ಕಾಟ್ರು ವೆಲಿಯಿದೈ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ ಅದಿತಿ. ಈ ಸಿನಿಮಾ ಮೂಲಕ ದಕ್ಷಿಣದಲ್ಲೂ ತಾನು ಬಿಜಿ ತಾರೆಯಾಗುತ್ತೇನೆ ಎಂದು ಕನಸು ಕಾಣುತ್ತಿದ್ದಾರೆ.
 
ಸಿನಿಮಾದಲ್ಲಿ ಮಣಿರತ್ನಂ ಈ ಬೆಡಗಿಯ ಅಂದಚೆಂದದ ಕೋನಗಳನ್ನು ಬೆಳ್ಳಿಪರದೆ ಮೇಲೆ ತೋರಿಸಲಿದ್ದಾರಂತೆ.  ಹಾಗಾಗಿ ಈ ಚಿತ್ರದ ಮೇಲೆ ಅದಿತಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ಮಣಿರತ್ನಂಗೆ ನಿರ್ದೇಶನದಲ್ಲೂ ಸಹಾಯ ಮಾಡುತ್ತಿದ್ದಾರಂತೆ.
 
ಆರಂಭದಿಂದಲೂ ನಿರ್ದೇಶಕನದ ಕಡೆಗೆ ತುಂಬಾ ಒಲವುಳ್ಳ ಬೆಡಗಿ ಅದಿತಿ. ಹಾಗಾಗಿ ಈಗ ನಿರ್ದೇಶನದ ಬಗ್ಗೆ ಸ್ವಲ್ಪ ಗಮನಹರಿಸುತ್ತಿದ್ದಾರಂತೆ. ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ ಸ್ವಲ್ಪ ಗ್ಯಾಪ್ ಸಿಕ್ಕಿದರೆ ಸಾಕಂತೆ ಚೆನ್ನೈಗೆ ಬಂದಿಳಿಯುತ್ತಿದ್ದಾರಂತೆ. ಮಣಿರತ್ನಂ ಜತೆ ಡೈರೆಕ್ಷನ್ ತಂತ್ರಗಳನ್ನೂ ಕಲಿತು ಬೀಗುತ್ತಿದ್ದಾಳೆ ಅದಿತಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ತಮ್ಮನಿಗೆ ಆ ಹೀರೋಯಿನ್ ಹೆಂಡತಿಯಾಗುವ ಅರ್ಹತೆ ಇದೆ