Select Your Language

Notifications

webdunia
webdunia
webdunia
webdunia

ಹಳದಿ ಬಣ್ಣದ ಡ್ರೆಸ್ ಧರಿಸಿ ಫೊಟೋಶೂಟ್‌ಗೆ ಪೋಸ್ ನೀಡಿದ ಶಿಲ್ಪಾ ಶೆಟ್ಟಿ

ಹಳದಿ ಬಣ್ಣದ ಡ್ರೆಸ್ ಧರಿಸಿ ಫೊಟೋಶೂಟ್‌ಗೆ ಪೋಸ್ ನೀಡಿದ ಶಿಲ್ಪಾ ಶೆಟ್ಟಿ
ಮುಂಬೈ , ಬುಧವಾರ, 25 ಮೇ 2016 (18:14 IST)
ಯಾಕೋ ಗೊತ್ತಿಲ್ಲ ಇತ್ತೀಚಿನ ದಿನಗಳಲ್ಲಿ ನಟಿಯರಲ್ಲಿ ಬಣ್ಣದ ಬಗ್ಗೆ ಕ್ರೇಜ್ ಹೆಚ್ಚಿದೆ. ಬಣ್ಣದ ಬಗ್ಗೆ ಬಾಲಿವುಡ್‌ನಲ್ಲಿ ಟ್ರೆಂಡ್ ಜಾಸ್ತಿ ಆಗ್ತಿದೆ. ಸನ್ನಿಲಿಯೋನ್, ಕತ್ರೀನಾ ಕೈಫ್, ಹಾಗೂ ಐಶ್ವರ್ಯ ರೈ ಬಣ್ಣ ಬಳಸಿ ಹೆಚ್ಚು ಸುದ್ದಿ ಮಾಡಿದ್ದರು.
ಇದೀಗ ಕರಾವಳಿ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಸರದಿ.. ಶಿಲ್ಪಾ ಶೆಟ್ಟಿ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹಳದಿ ಬಣ್ಣದ ಡ್ರೆಸ್ ಧರಿಸಿ ಶಿಲ್ಪಾ ಕಂಗೊಳಿಸುತ್ತಿದ್ದಾಳೆ, 
 
ಬ್ರ್ಯಾಂಡ್ ಪ್ರಚಾರ ಫೊಟೋಶೂಟ್‌ನಲ್ಲಿ ಶಿಲ್ಪಾ ಹಳದಿ ಬಣ್ಣದ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.. ಅವರು ಮನಮೋಹಕ ಲುಕ್ ನೋಡಿದ್ರೆ ಎಂಥವರನ್ನು ಮೋಡಿ ಮಾಡದೇ ಇರದು..ಇನ್ನೂ ಶಿಲ್ಪಾ ಶೆಟ್ಟಿ ಈ ವೇಳೆ ನ್ಯಾಚುರಲ್ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಅಲ್ಲದೇ ಈ ಹಿಂದೆ ಅಂತರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಲ್ಪಾ, ಯೋಗಾ ಮತ್ತು ಧರ್ಮಕ್ಕೆ ತಳಕು ಹಾಕುವುದು ಸರಿಯಲ್ಲ, ಇದರಿಂದ ಕೇವಲ ದೈಹಿಕ ಆರೋಗ್ಯ ಸುಧಾರಣೆ ಮಾತ್ರವಲ್ಲ, ಜೀವನದಲ್ಲಿ ಶಿಸ್ತು ಮೂಡುತ್ತದೆ. ಎಲ್ಲರೂ ಯೋಗ ಮಾಡಲೇಬೇಕು, ಆರೋಗ್ಯಕ್ಕೆ ಒಳ್ಳೆಯದು ಎಂದು ಶಿಲ್ಪಾ ಶೆಟ್ಟಿ ಸಲಹೆ ನೀಡುವ ಮೂಲಕ ಅಭಿಮಾನಿಗಳ ಮನಗೆದಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ವಿಕೆಂಡ್‌ನಲ್ಲಿ 40 ಕೋಟಿ ಗಳಿಕೆ ಕಂಡ ಬ್ರಹ್ಮೋತ್ಸವಮ್ ಚಿತ್ರ...