Select Your Language

Notifications

webdunia
webdunia
webdunia
webdunia

ಶಾರುಕ್‌ಖಾನ್‌ರೊಂದಿಗೆ ಮಧ್ಯರಾತ್ರಿವರೆಗೆ ಚಾಟ್ ಮಾಡಿದ ಸನ್ನಿ ಲಿಯೋನ್

ಶಾರುಕ್‌ಖಾನ್‌ರೊಂದಿಗೆ ಮಧ್ಯರಾತ್ರಿವರೆಗೆ ಚಾಟ್ ಮಾಡಿದ ಸನ್ನಿ ಲಿಯೋನ್
ಕೋಲ್ಕತಾ , ಮಂಗಳವಾರ, 3 ಜನವರಿ 2017 (14:24 IST)
ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದ ಜನತೆಗೆ ಮತ್ತೊಂದು ವಿಶೇಷತೆ ಕಾದಿತ್ತು. ಬಾಲಿವುಡ್ ಹಾಟ್ ಹಾಟ್ ನಟಿ ಸನ್ನಿ ಲಿಯೋನ್ ನೃತ್ಯ ಪಡ್ಡೆ ಹುಡುಗರ ನಿದ್ದೆ ಕೆಡಿಸಿತ್ತು. ಸುಮಾರು ಒಂದುವರೆ ಗಂಟೆಗಳ ಕಾಲ ನಡೆದ ಸನ್ನಿ ನೃತ್ಯಕ್ಕೆ ಮಾರುಹೋಗದವರೇ ಇಲ್ಲವಂತೆ.
ನಟಿ ಸನ್ನಿ ಲಿಯೋನ್ ತಮ್ಮ ಕೋಲ್ಕತಾ ಭೇಟಿಯ ಬಗ್ಗೆ ಸಂತಸದಿಂದ ಪ್ರತಿಕ್ರಿಯಿಸಿ ಇಲ್ಲಿನ ಜನ ತುಂಬಾ ಒಳ್ಳೆಯವರು ಎಂದು ಹೊಗಳಿದಳಂತೆ. ಅದು ಬಿಡಿ ವಿಶೇ,ವೆಂದರೆ, ಹೊಸ ವರ್ಷದ ದಿನದಂದು ಮಧ್ಯರಾತ್ರಿಯವರೆಗೆ ಬಾಲಿವುಡ್ ಬಾದ್‌ಶಾ ಶಾರುಕ್ ಅವರೊಂದಿಗೆ ಚಾಟ್‌ನಲ್ಲಿ ತೊಡಗಿದ್ದೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾಳೆ. 
 
ಪ್ರಧಾನಿ ಮೋದಿ, ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್‌ರಂತಹ ದಿಗ್ಗಜರನ್ನು ಹಿಂದಿಕ್ಕಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟ ನಡೆಸಿದ ನಟಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದೀರಿ ಅದರ ಬಗ್ಗೆ ಏನನ್ನಿಸುತ್ತದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸನ್ನಿ, ಅದೊಂದು ಅದ್ಭುತ. ಇಲ್ಲಿಯವರೆಗೆ ನಾನು ನಟಿಸಿದ ಚಿತ್ರಗಳಿಗೆಲ್ಲಾ ಅಭಿಮಾನಿಗಳು ಮನಪೂರ್ವಕವಾಗಿ ಸ್ಪಂದಿಸಿದ್ದಾರೆ. ಅವರ ಪ್ರೀತಿ ಔದಾರ್ಯಕ್ಕೆ ನಾನು ಮನಸೋತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆಲಿಯಾ ಜತೆ ಸಂಬಂಧ, ಸೋನಾಕ್ಷಿ ಜತೆ ಮದುವೆ ಎಂದ ಹೀರೋ