Select Your Language

Notifications

webdunia
webdunia
webdunia
webdunia

'ರಾಯಿಸ್' ಸಾಂಗ್ ಕುರಿತು ಎಕ್ಸೈಟ್ ಆಗಿರುವ ಸನ್ನಿ ಲಿಯೋನ್

Sunny Leone Raees film
ಮುಂಬೈ , ಮಂಗಳವಾರ, 28 ಜೂನ್ 2016 (17:34 IST)
ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಮುಂಬರುವ ಚಿತ್ರ 'ರಾಯಿಸ್' ಚಿತ್ರದ ಬಗ್ಗೆ ತುಂಬಾ ಎಕ್ಸೈಟ್ ಆಗಿದ್ದಾರಂತೆ. 'ಲೈಲಾ ಓ ಲೈಲಾ' ಚಿತ್ರದ ಸಾಂಗ್‌ಗೆ ಸನ್ನಿ ಶಾರೂಖ್ ಜತೆಗೆ ಸಖತ್ ಆಗೇ ಹೆಜ್ಜೆ ಹಾಕಲಿದ್ದಾರೆ. 'ಈ ಅವಕಾಶ ಸಿಕ್ಕಿರುವುದಕ್ಕೆ ಸಂತಸವಾಗಿದ್ದೇನೆ', 'ಇದಕ್ಕಾಗಿ ಕರೆಗಳು ಬಂದಿದ್ದವು'. 'ನನಗೆ ಇದು ಸರಿ ನಂಬರ್ ಇದೇಯಾ ಅಂತ ಆಶ್ಚರ್ಯವಾಗಿತ್ತು'. ಚಿತ್ರದಲ್ಲಿ ಪಾತ್ರ ಸಿಕ್ಕಿರುವುದರ ಬಗ್ಗೆ ಕೃತಜ್ಞತೆ ಸಲ್ಲಿಸಿದ್ದಾಳಂತೆ ಸನ್ನಿ ಲಿಯೋನ್.

ಇನ್ನೂ ಸೆಟ್‌ನಲ್ಲಿ ಶಾರೂಖ್ ಖಾನ್ ಅವರನ್ನು ಭೇಟಿ ಮಾಡಿದ ಬಳಿಕ ಸನ್ನಿ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಿಕೊಂಡಿದ್ದಾಳಂತೆ. 
 
ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿರುವ ಸನ್ನಿ ತನ್ನ ಪತಿ ಡೇನಿಯಲ್ ವೆಬ್ಬರ್ ಮನೆಗೆ ಬಂದ್ರೆ ಮೊಬೈಲ್ ಬಳಕೆ ಮಾಡಲು ಬೀಡುವುದಿಲ್ಲವಂತೆ. ಇನ್ನೂ ಊಟದ ಸಮಯದಲ್ಲಿ ಫೋನ್ ಬಳಕೆ ಮಾಡದೇ ಕಟ್ಟುನಿಟ್ಟಾಗಿರುವ ಸನ್ನಿ, ತಮ್ಮ ಪತಿ ಜತೆಗೆ ಲಾಂಗ್ ವಾಕಿಂಗ್‌ಗೆ ತೆರಳುತ್ತೇನೆ ಎಂದಿದ್ದಾರೆ. ಅಲ್ಲದೇ ನಿಮ್ಮ ಬಾಯ್ ಫ್ರೆಂಡ್ ಹಾಗೂ ಪತಿಯ ಜತೆಗೆ ವಾಕಿಂಗ್ ಹೋಗಿ ಎಂದು ಸನ್ನಿ ಸಲಹೆ ನೀಡಿದ್ದಾಳೆ. 
 
ಚಿತ್ರದ ನಿರ್ದೇಶಕ ರೈತೇಶ್ ಸಿದ್ಧವಾನಿ ಈ ಕುರಿತು ತಿಳಿಸಿದ್ದಾರೆ. ಚಿತ್ರದ ಮೊದಲ ಹಾಡಿನ ಶೂಟಿಂಗ್‌ ನಡೆದಿದೆ. ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದ ಸನ್ನಿ ಸಖತ್ತಾಗೆ ಸಾಂಗ್‌ನ್ನ ಎಂಜಾಯ್ ಮಾಡಿದ್ದಾರಂತೆ.. 
 
ಇನ್ನೂ ಸನ್ನಿ ಕುರಬಾನಿ ಸಾಂಗ್‌ನಲ್ಲೂ ಹೆಜ್ಜೆ ಹಾಕಿದ್ದಾರೆ. ಇದಕ್ಕಾಗಿ ಸಾಕಷ್ಟು ಕಸರತ್ತು ನಡೆಸಿದ್ದಾರೆ ಸನ್ನಿ, ಕುರಬಾನಿ ಹಾಡಿನ ಮೆಂಟರ್ ಆಗಿರುವ ಪ್ರಶಾಂತ್ ಸಾವಂತ್‌ರಿಂದ ಸ್ಟೆಪ್‌ಗಳನ್ನು ಕಲಿತ್ತಿದ್ದರು. ರಾಯಿಸ್ ಚಿತ್ರದಲ್ಲಿ ಶಾರೂಖ್ ಖಾನ್ ಜೊತೆಗೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದರು. ಇದಕ್ಕಾಗಿ ಟ್ರೈನಿಂಗ್ ಪಡೆದಿದ್ದರು ಸನ್ನಿ ಲಿಯೋನ್.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಣಯಭರಿತ ಹಾಸ್ಯ ಚಿತ್ರ 'ಲವ್ ಕೇ ಫನ್‌ಡೇ' ಜುಲೈ 15ಕ್ಕೆ ರಿಲೀಸ್