ಸದ್ಯಕ್ಕೆ ಎಸ್ ಎಸ್ ರಾಜಮೌಳಿ ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಬಾಹುಬಲಿ 2 ಚಿತ್ರಕ್ಕಾಗಿ ಶ್ರಮಿಸುತ್ತಿದ್ದಾರೆ. ಏಪ್ರಿಲ್ 28, 2017ರಲ್ಲಿ ಈ ಚಿತ್ರ ತೆರೆಕಾಣಲಿದೆ. ಡಿಸೆಂಬರ್ 27ಕ್ಕೆಲ್ಲಾ ಚಿತ್ರವನ್ನು ಮುಗಿಸಲು ಹೊರಟಿದ್ದಾರೆ ರಾಜಮೌಳಿ.
ಅದೆಲ್ಲಾ ಸರಿ ಬಾಹುಬಲಿ 2 ಚಿತ್ರದ ಬಳಿಕ ಅವರ ಮುಂದಿನ ಪ್ರಾಜೆಕ್ಟ್ ಯಾವುದಿರಬಹುದು? ಎಂಬ ಬಗ್ಗೆ ಈಗಾಗಲೆ ಚರ್ಚೆಗಳು ನಡೆಯುತ್ತಿವೆ. ಒಂದು ಮೂಲದ ಪ್ರಕಾರ ಅವರ ಮುಂಇದಿನ ಚಿತ್ರ ಅಮಿರ್ ಖಾನ್ ಜೊತೆಗೆ ಎನ್ನಲಾಗಿದೆ.
ಅಮೀರ್ ಖಾನ್ ಸಹ ದಂಗಲ್ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಅದಾದ ಬಳಿಕ ರಾಜಮೌಳಿ ಜೊತೆಗಿನ ಚಿತ್ರವಂತೆ. ಇವರಿಬ್ಬರ ಜೋಡಿ ಎಂದರೆ ಊಹಿಸುವುದು ಕಷ್ಟ. ಅದು ಬಜೆಟ್ ಆಗಿರಬಹುದು, ಕಥೆ, ಮೇಕಿಂಗ್ ಎಲ್ಲವೂ ಡಿಫರೆಂಟ್ ಆಗಿರುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಕೇವಲ ಒಂದು ಭಾಷೆಗಷ್ಟೇ ಸೀಮಿತವಾಗಬಾರದು ಎಂದು ಈ ಹಿಂದೊಮ್ಮೆ ರಾಜಮೌಳಿ ಹೇಳಿದ್ದರು. ಅಮೀರ್ ಖಾನ್ ಜೊತೆಗೆ ಸಿನಿಮಾ ಮಾಡಬೇಕಿದೆ ಎಂಬ ಆಸೆಯನ್ನೂ ವ್ಯಕ್ತಪಡಿಸಿದ್ದರು. ಈಗ ಇದೆಲ್ಲದಕ್ಕೂ ಕಾಲ ಕೂಡಿಬಂದಿದೆಯಾ?
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.