ಬಾಲಿವುಡ್ ನಟಿ ಶ್ರಿದೇವಿ ಫ್ಯಾಮಿಲಿ ಜತೆಗೆ ವೇಕೆಷನ್ ಎಂಜಾಯ್ ಮಾಡುತ್ತಿದ್ದಾರೆ. ಪತಿ ಬೋನಿ ಕಪೂರ್, ಮಕ್ಕಳಾದ ಜಾನವಿ, ಹಾಗೂ ಖುಷಿ ಜತೆಗೆ ಇರುವ ಫೊಟೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
ಫ್ಯಾಮಿಲಿ ಜತೆಗೆ ವೇಕೆಷನ್ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೊಟೋ ಶೇರ್ ಮಾಡಿದ್ದಾರೆ. ಈ ವೇಳೆ ಬೋನಿ ಕಪೂರ್ , ಶ್ರೀದೇವಿ, ಖುಷಿ, ಜಾನವಿ ಫೊಟೋಗೆ ಪೋಸ್ ನೀಡುತ್ತಿರುವುದನ್ನು ನೀವು ಇಲ್ಲಿ ಕಾಣಬಹುದು..
ಅಲ್ಲದೇ ಖುಷಿ ಜತೆಗೆ ಡೈನಿಂಗ್ ಟೇಬಲ್ ಮೇಲೆ ಕುಳಿತುಕೊಂಡು ಫೊಟೋ ತೆಗೆದುಕೊಂಡಿದ್ದಾರೆ. ಹಾಗಾಗಿ ಮಕ್ಕಳ ಜತೆಗೆ ಟೂರ್ ಹೋಗಿದ್ದಾರೆ. 52 ವರ್ಷದ ಶ್ರಿದೇವಿ ಚಾಂದನಿ, ಸದ್ಮಾ, ಮಿ.ಇಂಡಿಯಾ ಹಾಗೂ ಜುದಾಯಿ ಚಿತ್ರಗಳಲ್ಲಿ ನಟಿಸಿದ್ದಾರೆ.