Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಮನೆಗೆ ತಡ ರಾತ್ರಿ ಪಾರ್ಟಿ ಮಾಡಲು ಬಂದಿದ್ದು ಯಾರು ಗೊತ್ತೇ?

ಸಲ್ಮಾನ್ ಖಾನ್ ಮನೆಗೆ ತಡ ರಾತ್ರಿ ಪಾರ್ಟಿ ಮಾಡಲು ಬಂದಿದ್ದು ಯಾರು ಗೊತ್ತೇ?
Mumbai , ಮಂಗಳವಾರ, 29 ನವೆಂಬರ್ 2016 (14:42 IST)
ಮುಂಬೈ: ಬಾಲಿವುಡ್ ಖಾನ್ ಗಳೆಲ್ಲಾ ಪಾರ್ಟಿ ಪ್ರಿಯರು ಎಂಬುದು ಗೊತ್ತೇ ಇದೆ. ಸಲ್ಮಾನ್ ಖಾನ್ ಕೂಡಾ ಇದಕ್ಕೆ ಹೊರತಲ್ಲ. ಸಲ್ಲುಮಿಯಾ ನಿನ್ನೆ ತಮ್ಮ ಮನೆಯಲ್ಲಿ ಒಂದು ಪಾರ್ಟಿ ಆಯೋಜಿಸಿದ್ದರು. ಅದಕ್ಕೆ ಬಂದ ಗೆಸ್ಟ್ ಯಾರು ಗೊತ್ತೇ?

ಬೇರೆ ಯಾರೂ ಅಲ್ಲ. ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್. ತಡ ರಾತ್ರಿಯವರೆಗೆ ನಡೆದ ಪಾರ್ಟಿಯಲ್ಲಿ ಸಲ್ಲು-ಶಾರುಖ್ ಎಂಜಾಯ್ ಮಾಡಿದರಂತೆ. ಪಾರ್ಟಿ ಮುಗಿದ ಮೇಲೆ ಬೆಳಗಿನ ಜಾವ ನಾಲ್ಕು ಗಂಟೆಗೆ ಶಾರುಖ್ ರನ್ನು ಸ್ವತಃ ಸಲ್ಮಾನ್ ಕಾರಿನವರೆಗೆ ಬಂದು ಅಪ್ಪಿ ಬೀಳ್ಕಕೊಟ್ಟರು.

ಅಂದ ಹಾಗೆ ಈ ಪಾರ್ಟಿಗೆ ಶಾರುಖ್ ಮಾತ್ರವಲ್ಲದೆ, ಸಲ್ಮಾನ್ ನ ಮಿತ್ರರಾದ ಸುನಿಲ್ ಶೆಟ್ಟಿ, ಸೂರಜ್ ಪಾಂಚೋಲಿ, ಸಾಜಿದ್ ನಾಡಿಯಾದ್ವಾಲಾ ಹಾಗೂ ಸಲ್ಮಾನ್ ಕುಟುಂಬದವರು ಭಾಗವಹಿಸಿದ್ದರು. ಆದರೆ ಒಂದು ಕಾಲದಲ್ಲಿ ಶತ್ರುವಾಗಿದ್ದು, ನಂತರ ಮಿತ್ರರಾದ ಶಾರುಖ್ ರನ್ನು ಮಾತ್ರ ಸಲ್ಲು ವಿಶೇಷವಾಗಿ ಬೀಳ್ಕೊಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಶ್-ರಾಧಿಕಾ ಪಂಡಿತ್ ವಿವಾಹ ಸುದ್ದಿಗಾಗಿ ವಿಶೇಷ ಫೇಸ್ ಬುಕ್ ಪೇಜ್