Select Your Language

Notifications

webdunia
webdunia
webdunia
webdunia

ಇಂದು ಮಧ್ಯಾಹ್ನ ತಲೆಬೋಳಿಸಿಕೊಳ್ಳುತ್ತಾರಂತೆ ಸೋನು ನಿಗಂ!

ಇಂದು ಮಧ್ಯಾಹ್ನ ತಲೆಬೋಳಿಸಿಕೊಳ್ಳುತ್ತಾರಂತೆ ಸೋನು ನಿಗಂ!
Mumbai , ಬುಧವಾರ, 19 ಏಪ್ರಿಲ್ 2017 (12:30 IST)
ಮುಂಬೈ: ಜನಪ್ರಿಯ ಗಾಯಕ ಸೋನು ನಿಗಂ ಇಂದು ಮಧ್ಯಾಹ್ನ ಸರಿಯಾಗಿ ಎರಡು ಗಂಟೆಗೆ ತಲೆ ಬೋಳಿಸಿಕೊಳ್ಳಲಿದ್ದಾರಂತೆ! ಏನಿದು ವಿಚಿತ್ರ ಅಂದುಕೊಳ್ಳಲಿದ್ದಾರೆ. ತಾವು ಮಾಡಿದ ಟ್ವೀಟ್  ವಿವಾದಾತ್ಮಕ ರೂಪ ಪಡೆದಿದ್ದು, ತಮ್ಮ ಮೇಲೆ ಸವಾಲ್ ಹಾಕಿದವರಿಗೆ ಪ್ರತಿ ಸವಾಲು ಹಾಕಲು ಅವರು ನಿರ್ಧರಿಸಿದ್ದಾರೆ.

 
ಧಾರ್ಮಿಕ ಕ್ಷೇತ್ರದಲ್ಲಿ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಪ್ರಾರ್ಥನಾ ಕೇಂದ್ರಗಳಲ್ಲಿ ಮೈಕ್ ಬಳಸಿ ಧ್ವನಿ ಮಾಲಿನ್ಯವಾಗುವಂತೆ ಪ್ರಾರ್ಥನೆ ಮಾಡಬಾರದು ಎಂದು ಸೋನು ಈ ಮೊದಲು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಲದ ಅಲ್ಪಸಂಖ್ಯಾತರ ಒಕ್ಕೂಟವೊಂದು ಸೋನು ತಲೆ ಬೋಳಿಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುವುಲ್ಲದೆ, ಆ ಹೇಳಿಕೆ ನೀಡಿದ ವ್ಯಕ್ತಿಗೆ 10 ಲಕ್ಷ ರೂ. ನೀಡುವುದಾಗಿ ಎಚ್ಚರಿಸಿತ್ತು. ಇದೀಗ ಈ ಸವಾಲಿಗೆ ಪ್ರತಿ ಸವಾಲು ಹಾಕಿರುವ ಸೋನು ನಿಗಂ, ಇಂದು ತಲೆ ಬೋಳಿಸಿಕೊಳ್ಳುತ್ತೇನೆ, 10 ಲಕ್ಷ ರೆಡಿ ಮಾಡಿಟ್ಟುಕೊಳ್ಳಿ ಮೌಲ್ವಿ ಸಾಹೇಬರೇ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ರೀತಿಯ ಮತ್ತೊಂದು ಚಿತ್ರ ಮಾಡಿದರೆ ಸತ್ತೇ ಹೋಗ್ತೀನಿ: ಪ್ರಭಾಸ್