ಖ್ಯಾತ ನಟ ಅನಿಲ್ ಕಪೂರ್ ಮಗಳು, ಬಾಲಿವುಡ್ ಕಥಾನಾಯಕಿ ಸೋನಂ ಕಪೂರ್ ವೈಯಕ್ತಿಕ ತಾಜಾ ಸಮಾಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ತಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
"ಚಿಕ್ಕಂದಿನಲ್ಲಿ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾದ ವಿಷಯ ನನಗೆ ಗೊತ್ತು. ಇದರಿಂದ ನಾನು ಮಾನಸಿಕ ನೋವು ಅನುಭವಿಸಿದ್ದೇನೆ" ಎಂದಿದ್ದಾರೆ ಸೋನಂ. ಸಿನಿಮಾ ವಿಮರ್ಶಕ ರಾಜೀನ್ ಮಸಂದ್ ಅವರು 2016ರ ಶಕ್ತಿವಂತ ಮಹಿಳಾ ಪಾತ್ರಗಳಲ್ಲಿ ಸೋನಂ ಕಪೂರ್, ವಿದ್ಯಾ ಬಾಲನ್, ಅನುಷ್ಕಾ ಶರ್ಮಾ, ರಾಧಿಕಾ ಆಪ್ಟೆ ಅವರೊಂದಿಗೆ ವಿಶೇಷ ಶೋ ಮಾಡಿದ್ದಾರೆ.
ಈ ಶೋನ ಪ್ರೊಮೋ ಇತ್ತೀಚೆಗೆ ಆನ್‍ಲೈನ್‌ನಲ್ಲಿ ಬಿಡುಗಡೆಯಾಗಿದೆ. ಈ ಚರ್ಚಾ ಕಾರ್ಯಕ್ರಮದಲ್ಲಿ ತಾವು ಎದುರಿಸಿದ ಲೈಂಗಿಕ ದಾಳಿ ಬಗ್ಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿದ್ಯಾ ಬಾಲನ್, ಈ ರೀತಿಯ ಸಮಸ್ಯೆಗೆ ಸಿಲುಕಿದ್ದು ಸೋನಂ ತಪ್ಪಲ್ಲ. ಆದರೆ ಬಾಧಿತರದೇ ತಪ್ಪು ಎಂಬಂತೆ ಅಭಿಪ್ರಾಯ ಪಡುವುದು ತಪ್ಪು ಎಂದಿದ್ದಾರೆ. "ನಾವೆಲ್ಲ ಒಂದು ನೀರಿನ ಗುಳ್ಳೆಯಲ್ಲಿದ್ದೇವೆ. ನಾವು ಅಂದುಕೊಂಡಿದ್ದು ನಿಜವಲ್ಲ" ಎಂದಿದ್ದಾರೆ ಆಲಿಯಾ ಭಟ್. ಬಾಲಿವುಡ್ ತಾರೆಗಳಿಗೂ ಲೈಂಗಿಕ ಕಿರುಕುಳ ತಪ್ಪಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.