Select Your Language

Notifications

webdunia
webdunia
webdunia
webdunia

ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಸೋನಾಕ್ಷಿ ಬಿಂದಾಸ್ ಪೋಸ್..

sonakshi Sinha
ಮುಂಬೈ , ಗುರುವಾರ, 2 ಜೂನ್ 2016 (17:12 IST)
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇವತ್ತು ಬರ್ತಡೇ ಸಂಭ್ರಮ.. ಸೋನಾಕ್ಷಿ ಫಿಲ್ಮಂ ಜಗತ್ತಿಗೆ ಬರುವ ಮುನ್ನ ಫ್ಯಾಶನ್ ಡಿಸೈನರ್ ಆಗುವ ಕನಸು ಕಾಣುತ್ತಿದ್ದರು.. ಆದ್ರೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸೋನಾಕ್ಷಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 
ಇದೀಗ ಸೋನಾಕ್ಷಿ L’Officiel ಮ್ಯಾಗಜೀನ್ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಜೂನ್ ಆವೃತ್ತಿಯ ಕವರ್ ಪೇಜ್‌ಗಾಗಿ ನಡೆದ ಫೊಟೋ ಶೂಟ್‌ನಲ್ಲಿ ಸೋನಾಕ್ಷಿ ಬಿಂದಾಸ್ ಆಗಿ ಪೋಸ್ ನೀಡಿದ್ದಾಳೆ . ಈ ಮೂಲಕ ಸುಂದರವಾಗಿ ಕಾಣಿಸುತ್ತಿದ್ದಾಳೆ ಸೋನಾಕ್ಷಿ ಸಿನ್ಹಾ.

ಇದುವರೆಗೂ ಸೋನಾಕ್ಷಿ 13 ಚಿತ್ರಗಳಲ್ಲಿ ನಟಿಸಿದ್ದಾಳೆ. ಐಟಂ ಸಾಂಗ್‌ಗಳಲ್ಲೂ ಮಿಂಚಿ ಸೈ ಎನ್ನಿಸಿಕೊಂಡಿದ್ದಾಳೆ ಸೋನಾಕ್ಷಿ.. 29ನೇಯ ವರ್ಷಕ್ಕೆ ಕಾಲಿಡುತ್ತಿರುವ ನಟಿ ಸೋನಾಕ್ಷಿ ಸಿನ್ಹಾ, ರಾಜಕಾರಣಿ ಶತೃಘ್ನ ಸಿನ್ಹಾ ಪುತ್ರಿಯಾಗಿದ್ದಾರೆ.
 
ದಬ್ಬಾಂಗ್ ಚಿತ್ರದಲ್ಲಿ ಸಲ್ಮಾನ್ ಜತೆಗೆ ಕಾಣಿಸಿಕೊಂಡು ಸೂಪರ್ ಹಿಟ್ ಜೋಡಿಗಳು ಎಂದು ಖ್ಯಾತಿ ಗಳಿಸಿದ್ದರು. ಈ ಚಿತ್ರಕ್ಕಾಗಿ ಸೋನಾಕ್ಷಿ ಅವರನ್ನು ಸಲ್ಮಾನ್ ಸಂಪರ್ಕ ಮಾಡಿದ್ದರು.

ಅದಲ್ಲದೇ ತುಂಬಾ ದಪ್ಪಗಿದ್ದ ಸೋನಾಕ್ಷಿಯನ್ನು ಸ್ಲಿಮ್ ಆಗುವುದರ ಬಗ್ಗೆ ಸಲ್ಲು ಸೂಚನೆ ನೀಡಿದ್ದರು. ಅದಾದ ಬಳಿಕ ದಬ್ಬಾಂಗ್ ಚಿತ್ರದಲ್ಲಿ ಸಲ್ಮಾನ್ ಜತೆ ನಟಿಸಿದ್ದ ಸೋನಾಕ್ಷಿ ಹಿಟ್ ಜೋಡಿ ಎಂದು ಹೆಸರು ಮಾಡಿತ್ತು.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೆಯ ಮಗುವನ್ನು ಫ್ಯಾನ್ಸ್‌ಗೆ ತೋರಿಸಲು ಎಕ್ಟೈಟ್ ಆಗಿದ್ದಾರಂತೆ ಜೆನೆಲಿಯಾ