ನಟನನ್ನು ಪ್ರೀತಿ ಮಾಡುವುದೆಂದರೆ ಸುಲಭದ ಕೆಲಸವಲ್ಲ: ಸೋಹಾ ಅಲಿ ಖಾನ್

Webdunia
ಶನಿವಾರ, 18 ಜೂನ್ 2016 (11:29 IST)
ಬಾಲಿವುಡ್ ನಟಿ ಸೋಹಾ ಅಲಿ ಖಾನ್ ನಟ ಕುನಾಲ್ ಅವರನ್ನು ವಿವಾಹವಾಗಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಸೋಹಾ ಅಲಿ ಖಾನ್, ನಟನನ್ನು ಪ್ರೀತಿ ಮಾಡುವುದೆಂದರೆ ಸುಲಭದ ಕಾರ್ಯವಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಅನುಕೂಲಗಳು ಹಾಗೂ ಅನಾನೂಕೂಲಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಇನ್ನೂ ಸೋಹಾ ಅಲಿ ಖಾನ್ ನಟ ಕುನಾಲ್ ಅವರನ್ನು 2014 ಜುಲೈ 14ರಲ್ಲಿ ಎಂಗೇಜಮೆಂಟ್ ಮಾಡಿಕೊಂಡಿದ್ದರು. ಬಳಿಕ 2015ರಲ್ಲಿ ಇಬ್ಬರು ಮದುವೆಯಾಗಿದ್ದರು. ಇದೇ ವರ್ಷ ಇಬ್ಬರು ಡೈವೋರ್ಸ ನೀಡಲಿದ್ದಾರೆ ಎಂಬ ವದಂತಿ ಕೂಡ ಹರಡಿತ್ತು.

ಈ ಬಗ್ಗೆ ಶೇರ್ ಮಾಡಿರುವ ಸೋಹಾ ಅಲಿ ಖಾನ್, ಮದುವೆ ಕುರಿತು ತನ್ನ ತಾಯಿಯ ಎದುರು ಪ್ರಸ್ತಾಪ ಮಾಡಿದಾಗ ತನ್ನ ನಿರ್ಧಾರದ ಬಗ್ಗೆ ನನ್ನ ತಾಯಿ ಶರ್ಮಿಳಾ ಠಾಗೋರ್  ಪ್ರಶ್ನೆ ಮಾಡಿದ್ದರು. ಇದು ಆ ಸಂದರ್ಭದಲ್ಲಿ ತುಂಬಾ ಕಷ್ಟಕರವಾಗಿತ್ತು ಎಂದು ಸೋಹಾ ಅಲಿ ಬಿಚ್ಚಿಟ್ಟಿದ್ದಾರೆ. 
 
ನೀನು ನಟನನ್ನು ಯಾಕೆ ಮದುವೆಯಾಗುತ್ತಿದ್ದೀಯಾ? ಮುಂದೆ ನಿನಗೆ ಕಷ್ಟವಾಗಲಿದೆ ಎಂದು ನನ್ನ ತಾಯಿ ಶರ್ಮಿಳಾ ಠಾಗೋರ್ ಹೇಳಿದ್ದರು .ಆದ್ರೆ ನಾನು ಅದಾಗಲೇ ನಟ ಕುನಾಲ್ ಜತೆಗೆ ಪ್ರೀತಿಯಲ್ಲಿ ಬಿದಿದ್ದೆ, ಇದರಿಂದ ಸಾಕಷ್ಟು ಅನುಕೂಲಗಳು ಹಾಗೂ ಅನಾನೂಕೂಲಗಳಾಗಿವೆ ಎಂದು ಸೋಹಾ ಅಲಿ ಖಾನ್ ತಿಳಿಸಿದರು.
 
ಇದೇ ವೇಳೆ ಚಿತ್ರಗಳಲ್ಲಿ ರೋಮ್ಯಾನ್ಸ್ ವಿಷಯದ ಬಗ್ಗೆ ಮಾತನಾಡಿರುವ ಅವರು ಆನ್ ಸ್ಕ್ರೀನ್ ಮೇಲೆ ನಟರ ಜತೆಗೆ ರೋಮ್ಯಾನ್ಸ್ ಮಾಡುವುದೆಂದರೆ ಓಕೆ.. ನಮಗೆ ನಮ್ಮ ಬಗ್ಗೆ ತಿಳಿದಿದೆ. ಆದ್ದರಿಂದ ನಮಗೆ ಆನ್ ಸ್ಕ್ರೀನ್ ಮೇಲೆ ಬೇರೆಯೊಬ್ಬರ ಜತೆಗೆ ರೋಮ್ಯಾನ್ಸ್ ಮಾಡುವವುದೆಂದರೆ ನಿಮಗೆ ಇದು ರೋಮ್ಯಾನ್ಸ್ ಅಲ್ಲ ಎಂದು ಭಾಸವಾಗುತ್ತದೆ ಎಂದು ತಿಳಿಸಿದರು. 
 
ಇನ್ನೂ ಸೋಹಾ ಅಲಿ ಖಾನ್ 'ದಿ ತಾರಾ ಶರ್ಮಾ' ಶೋ ಮೇಲೆ ತಮ್ಮ ವೈಯಕ್ತಿಕ ಜೀವನದ ಕೆಲ ಅಂಶಗಳನ್ನು ಸೋಹಾ ಬಿಚ್ಚಿಡಲಿದ್ದಾರೆ. ಮದುವೆ, ಕುಟುಂಬ , ಕೆರಿಯರ್ ಕುರಿತು ಹೇಳಲಿದ್ದಾರೆ. ಈ ಶೋ ಹೋಸ್ಟ್ ಆಗಿ ನಟಿ ತಾರಾ ಶರ್ಮಾ ಅವರು ಕಾಣಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರದ ಅಭಿನಯಕ್ಕೆ ಪ್ರಶಂಸೆ ಬೆನ್ನಲ್ಲೇ ಬಾಲಿವುಡ್‌ಗೆ ಜಿಗಿದ ರುಕ್ಮಿಣಿ ವಸಂತ್

ಕೆಜಿಎಫ್‌ ಚಾಪ್ಟರ್‌ 2 ಸಹ ನಿರ್ದೇಶಕ ಬಾಳಲ್ಲಿ ಇದೆಂಥಾ ದುರಂತ

ಒಳ್ಳೆ ಪಾತ್ರ ಸಾಯಿಸೋದು ಎಷ್ಟು ಸರಿ: ಲಕ್ಷ್ಮೀ ನಿವಾಸ ಸೀರಿಯಲ್ ವಿರುದ್ಧ ಸಿಡಿದೆದ್ದ ಹಿರಿಯ ನಟಿ

ರಿಷಬ್ ಶೆಟ್ಟಿ ಜೊತೆ ಸರಿಯಿಲ್ವಾ, ಏನಾಗಿದೆ: ರಾಜ್ ಬಿ ಶೆಟ್ಟಿ ಕೊನೆಗೂ ಕೊಟ್ರು ಮಾಹಿತಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ಟ್ರಯಲ್ ಇಂದಿನಿಂದ: ರೇಣುಕಾ ಪೋಷಕರ ಹೇಳಿಕೆ ದರ್ಶನ್ ಗೆ ಪ್ಲಸ್ ಪಾಯಿಂಟ್ ಆಗುತ್ತಾ

ಮುಂದಿನ ಸುದ್ದಿ
Show comments