ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಜತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಸಹೋದರಿ

Sampriya
ಸೋಮವಾರ, 23 ಜೂನ್ 2025 (15:15 IST)
Photo Credit X
ಬೆಂಗಳೂರು: ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರ ನಿಧನ ಇಡೀ ಚಿತ್ರರಂಗಕ್ಕೆ ಬಿಗ್ ಶಾಕ್ ನೀಡಿದೆ. ಹೃದಯಾಘಾತದಿಂದ ಕೈಗಾರಿಕೋದ್ಯಮಿಯ ಸಂಜಯ್ ಕಪೂರ್ ಅವರು ಹಠಾತ್ ಸಾವನ್ನಪ್ಪಿದರು. ಇದೀಗ ಸಹೋದರ ಜತೆಗಿನ ಬಾಲ್ಯದ ನೆನಪನ್ನು ಸಹೋದರಿ ಮಂದಿರಾ ಕಪೂರ್ ಅವರು ಹಂಚಿಕೊಂಡಿದ್ದಾರೆ. 

ಬಾಲ್ಯದ ಮಧುರವಾದ ಫೋಟೋಗಳನ್ನು ಹಂಚಿಕೊಂಡ ಅವರು, ಬಾಲ್ಯದಲ್ಲಿ ನಡೆದ ಘಟನೆಯಿಂದಾಗಿ ತನ್ನ ಸಹೋದರನ ಬಳಿ ನಾಲ್ಕು ವರ್ಷ ಮಾತು ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರ ಸಂಬಂಧ ತನ್ನ ತಪ್ಪೊಪ್ಪಿಗೆಯೊಂದಿಗೆ ಬರಹವನ್ನು ಆರಂಭಿಸಿದರು. 

ಈ ಪೋಸ್ಟ್‌ಗೆ ಸಂಜಯ್ ಕಪೂರ್ ಅವರ ಮೊದಲ ಪತ್ನಿ ನಂದಿತಾ ಮಹತಾನಿ ಅವರು ಕೆಂಪು ಹೃದಯದ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಸಂಜಯ್ ಮತ್ತು ಕರಿಷ್ಮಾ ಅವರು 2003 ರಲ್ಲಿ ವಿವಾಹವಾದರು, ಅದ್ದೂರಿ ಸಮಾರಂಭದಲ್ಲಿ ಅದು ಆ ಕಾಲದ ಬಾಲಿವುಡ್ ವಿವಾಹಗಳಲ್ಲಿ ಒಂದಾಗಿತ್ತು. ಈ ಜೋಡಿ  ಮಾರ್ಚ್ 11, 2005ರಂದು ಸಮೈರಾ ಹಾಗೂ 12, 2011 ರಂದು ಕಿಯಾನ್ ಎಂಬ ಮಗುವನ್ನು ಸ್ವಾಗತಿಸಿದರು. 

2014 ರ ಹೊತ್ತಿಗೆ, ಬಿರುಕುಗಳು ಕಾಣಿಸಿಕೊಳ್ಳಲಾರಂಭಿಸಿದವು ಮತ್ತು ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. 2016ರಲ್ಲಿ ಈ ಜೋಡಿ ಅಧಿಕೃತವಾಗಿ ದೂರವಾದರು. 2017 ರಲ್ಲಿ, ಸಂಜಯ್ ಮತ್ತೇ ಪ್ರೀತಿಯನ್ನು ಕಂಡುಕೊಂಡು ದೆಹಲಿ ಮೂಲದ ಮಾಡೆಲ್ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments