Select Your Language

Notifications

webdunia
webdunia
webdunia
webdunia

ಅಕಿರಾ ಸಿನಿಮಾ ಪ್ರಚಾರ ಮಾಡಿದ ಸಿದ್ದಾರ್ಥ ಮಲ್ಹೋತ್ರಾ, ಸೋನಾಕ್ಷಿ ಸಿನ್ಹಾ

ಅಕಿರಾ ಸಿನಿಮಾ ಪ್ರಚಾರ ಮಾಡಿದ ಸಿದ್ದಾರ್ಥ ಮಲ್ಹೋತ್ರಾ, ಸೋನಾಕ್ಷಿ ಸಿನ್ಹಾ
ಮುಂಬೈ , ಶುಕ್ರವಾರ, 26 ಆಗಸ್ಟ್ 2016 (17:17 IST)
'ಅಕಿರಾ' ಚಿತ್ರದ ಪ್ರಚಾರವನ್ನು ಸೋನಾಕ್ಷಿ ಸಿನ್ಹಾ ಹಾಗೂ ಸಿದ್ಧಾರ್ಥ ಮಲ್ಹೋತ್ರಾ ತಮ್ಮದೇ ಆದ ಸ್ಟೈಲ್‌ನಲ್ಲಿ ಪ್ರಚಾರ ಮಾಡಿದ್ದಾರೆ. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಸಿದ್ದಾರ್ಥ ಮಲ್ಹೋತ್ರಾ ಅವರನ್ನು ಕಾಣಬಹುದು.
ಇನ್ನೂ ಸೋನಾಕ್ಷಿ ಸಿನ್ಹಾ ಮುಂದಿನ 'ಅಕಿರಾ' ಚಿತ್ರದ ಬಿಡುಗಡೆಗಾಗಿ ಕಾತುರರಾಗಿದ್ದಾರೆ.ಹ್ಯಾಂಡ್‌ಸಮ್ ಬಾಯ್ ಫೋಕ್ಸ್ ಸ್ಟಾರ್ ಸ್ಟುಡಿಯೋದಲ್ಲಿ ಚಿತ್ರದ ಪ್ರಚಾರ ಮಾಡಿದ್ದಾರೆ.
 
ದಾಬಂಗ್ ಚೆಲುವೆ ಸೋನಾಕ್ಷಿ ಸಿನ್ಹಾ ಅವರನ್ನು ಮತ್ತೆ ಯಾವಾಗ ತೆರೆ ಮೇಲೆ ನೋಡ್ತೇವೋ ಅಂತಾ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಸೋನಾಕ್ಷಿ ಸಿನ್ಹಾ ಅಭಿನಯದ ಅಕಿರ ಸಿನಿಮಾ ಇದೇ ಸಪ್ಟೆಂಬರ್ ನಲ್ಲಿ ರಿಲೀಸ್ ಆಗಲಿದೆ.

ಸೆಪ್ಟಂಬರ್ 23 ರಂದು 'ಅಕಿರಾ' ಸಿನಿಮಾ ರಿಲೀಸ್ ಆಗಲಿದೆ ಅಂತಾ ಸಿನಿಮಾ ತಂಡ ಹೇಳಿದೆ.ಅಂದ್ಹಾಗೆ ಅಕಿರಾ ಸಿನಿಮಾ ಸೋನಾಕ್ಷಿ ಪಾಲಿಗೆ ಅತ್ಯಂತ ಮಹತ್ವದ ಸಿನಿಮಾ.ಇದುವೆರಗೂ ತಾನು ನಿರ್ವಹಿಸದೇ ಇರುವಂತಹ ಪಾತ್ರವನ್ನು ಸೋನಾಕ್ಷಿ ಸಿನ್ಹಾ ಈ ಸಿನಿಮಾದಲ್ಲಿ ಮಾಡಿದ್ದಾರೆ.
 
ಅಕಿರಾ ಸಿನಿಮಾವನ್ನು ಎ.ಆರ್ ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ.ಇನ್ನು ಸಿನಿಮಾದಲ್ಲಿ ಅಭಿನಯಿಸುತ್ತಾ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ ಅಂತಾಸೋನಾಕ್ಷಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ಅಭಿಮಾನಿಗಳಂತೂ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಕಾಯುತ್ತಾ ಕುಳಿತಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

'ರಂಗಿತರಂಗ' ನಿರ್ಮಾಪಕರ ಮುಂದಿನ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ,ಶಾನ್ವಿ