Select Your Language

Notifications

webdunia
webdunia
webdunia
webdunia

ಸಿದ್ಧಾರ್ಥ್ ಮಲ್ಹೋತ್ರಾ ಬಗೆಗಿನ ಆರೋಪವನ್ನು ತಳ್ಳಿ ಹಾಕಿದ ಆಲಿಯಾ

ಸಿದ್ಧಾರ್ಥ್ ಮಲ್ಹೋತ್ರಾ ಆಲಿಯಾ ಭಟ್
ಬಾಲಿವುಡ್ ನಲ್ಲಿ ಸದ್ಯ ಜೋಡಿ ಹಕ್ಕಿಗಳೆಂದು ಕರೆಸಿಕೊಳ್ಳುವವರಲ್ಲಿ ಆಲಿಯಾ ಭಟ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರು ಕೂಡ ಒಬ್ಬರು.ಆದ್ರೆ ಕೆಲ ತಿಂಗಳಿಂದ ಆಲಿಯಾ ಭಟ್ ಹಾಗೂ ಸಿದ್ದು ನಡುವೆ ಎಲ್ಲವೂ ಸರಿಯಾಗಿಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದ್ದವು.ಆದ್ರೀಗ ಆ ಎಲ್ಲಾ ಸುದ್ದಿಗಳಿಗೆ ಆಲಿಯಾ ಭಟ್ ಅವರೇ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಉಡ್ತಾ ಪಂಜಾಬ್ ಸಿನಿಮಾಜ ಕುರಿತಾಗಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಆಲಿಯಾ, ಸಿದ್ಧಾರ್ಥ್ ಹುಡುಗಿಯೊಬ್ಬಳೊಂದಿಗೆ ಡೇಟಿಂಗ್ ನಡೆಯುತ್ತಿದ್ದಾರೆ ಅನ್ನೋದು ಸುಳ್ಳು ಸುದ್ದಿ.ಅವರು ಯಾರ ಜೊತೆ ಕೂಡ ಡಿನ್ನರ್ ಗೆ ಹೋಗಿಲ್ಲ. ನಾನು ಈ ಬಗ್ಗೆ ಅವರ ಬಳಿಯೇ ನೇರವಾಗಿ ಕೇಳಿದ್ದೇನೆ,ಅವರೇ ತಾನು ಹೋಗಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.
 
ಅಲ್ಲದೇ ನಾವಿಬ್ಬರು ಉತ್ತಮ ಗೆಳೆಯರು. ಜೊತೆಯಾಗಿ ನಾವು ಸಿನಿಮಾರಂಗಕ್ಕೆ ಬಂದವರು. ನನ್ನ ಹಾಗೂ ಆತನ ನಡುವೆ ಉತ್ತಮವಾದ ಬಾಂಧವ್ಯವಿದೆ. ಅವನು ನನ್ನ ಜೀವನದ ಅತ್ಯಂತ ಪ್ರಮುಖವಾದ ವ್ಯಕ್ತಿ ಅಂತಾ ಆಲಿಯಾ ಹೇಳಿದ್ದಾರೆ.
 
ಸದ್ಯ ಆಲಿಯಾ ಅವರ ಮಾತುಗಳನ್ನು ಕೇಳಿದ್ರೆ ಆಲಿಯಾ ಹಾಗೂ ಸಿದ್ಧಾರ್ಥ್ ನಡುವೆ ಎಲ್ಲವೂ ಸರಿಯಿಲ್ಲ ಅಂತಾ ಕೇಳಿ ಬರುತ್ತಿದ್ದ ಮಾತುಗಳಿಗೆ ತೆರೆ ಬಿದ್ದಂತಾಗಿದೆ.ಇದುವರೆಗೂ ಆಲಿಯಾ ಹಾಗೂ ಸಿದ್ಧಾರ್ಥ್  ಸ್ಟೂಡೆಂಟ್ ಆಫ್ ದಿ ಇಯರ್, ಕಪೂರ ಆಂಡ್ ಸನ್ಸ್ ಸಿನಿಮಾದಲ್ಲಿ ಜೊತೆಯಾಗಿ ಅಭಿನಯಿಸಿದ್ದಾರೆ. ಇನನು ಆಶಿಕಿ-2 ಸಿನಿಮಾದ ಸೀಕ್ವೆಲ್ ನಲ್ಲೂ ಇವರಿಬ್ಬರು ಜೊತೆಯಾಗಿ ಅಭಿನಯಿಸಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಗಗನಯಾತ್ರಿಯಾಗುತ್ತಿದ್ದಾರೆ ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್