Select Your Language

Notifications

webdunia
webdunia
webdunia
webdunia

ಹಾಲಿವುಡ್ ನಟನ ಜತೆ ಅಭಿನಯಸಲಿದ್ದಾರೆ ಶೃತಿ ಹಾಸನ್.

ಹಾಲಿವುಡ್ ನಟನ ಜತೆ ಅಭಿನಯಸಲಿದ್ದಾರೆ ಶೃತಿ ಹಾಸನ್.
ಮುಂಬೈ , ಶುಕ್ರವಾರ, 29 ಏಪ್ರಿಲ್ 2016 (18:36 IST)
ಮುಂದಿನ ಚಿತ್ರದಲ್ಲಿ ಕಮಲ್ ಹಾಸನ್ ಜತೆ ನಟಿಸಲಿದ್ದಾರೆ ಶೃತಿ ಹಾಸನ್.. ಅದರ ಜತೆಗೆ ಮತ್ತೊಂದು ವಿಶೇಷ ಅಂದ್ರೆ ಶೃತಿ ಹಾಲಿವುಡ್ ನಟನೊಬ್ಬರ ಜತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.

ಮನು ನಾರಾಯಣ್ ಎಂಬುವವರ ಜತೆ ಸ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ ಶೃತಿ ಹಾಸನ್. 30 ವರ್ಷದ ಹುಡುಗನ ಪಾತ್ರದಲ್ಲಿ ಮಿಂಚಲಿದ್ದಾರೆ ಮನು ನಾರಾಯಣ.. ರೋಮ್ಯಾಂಟಿಕ್ ಆಗಿ ಮೂಡ್ ನಲ್ಲಿದ್ದಾರೆ ಇಂಡಿಯನ್ - ಅಮೇರಿಕನ್ ನಟ ಮನು ನಾರಾಯಣ್... 
 
ಅಲ್ಲದೇ ಹಾಲಿವುಡ್‌ನಲ್ಲೂ ಕೆಲ ನಾಟಕಗಳಲ್ಲಿ ಮನು ಸೈ ಎನ್ನಿಸಿಕೊಂಡಿದ್ದಾರೆ. ದಿ ಲವ್ ಗುರು, ವಾಲ್ ಸ್ಟ್ರೀಟ್, ಮನಿ ನೆವರ್ ಸ್ಲಿಪ್ಸ್, ಇವರ ಮರೆಯಲಾರದಂತಹ ನಾಟಕಗಳು. 

ಈ ಹಿಂದೆ ಪ್ರಕಾಶ್ ರಾವಲ್ ಜೊತೆ ಶೃತಿ ಮಗಳಾಗಿ ನಟಿಸಿದ್ದರು. ಆದ್ರೆ ಈ ಸಿನಿಮಾದಲ್ಲಿ ಶೃತಿ ತಮ್ಮ ಅಪ್ಪನ ಜೊತೆ ನಟಿಸುತ್ತಿರುವುದು ವಿಶೇಷವಾಗಿದೆ. ಟಿ.ಕೆ ರಾಜೀವ್ ಕುಮಾರ್ ನಿರ್ದೇಶನದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಚಿತ್ರದ ಟೈಟಲ್ ಕುರಿತು ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಚಿತ್ರದ ಕುರಿತು ಇನ್ನಷ್ಟೆ ಮಾಹಿತಿ ತಿಳಿದು ಬರಬೇಕಿದೆ. 
  
ಇನ್ನೂ ಶೃತಿ ತಂಗಿ ಅಕ್ಷರಾ ಕೂಡ ಈ ಹಿಂದೆ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದರು. ಇಲ್ಲಿಂದಲೇ  ತಮ್ಮ ವೃತ್ತಿಯನ್ನು ಆರಂಭ ಮಾಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ  ಕಮಲಾ ಹಾಸನ್, ತಮ್ಮ ಇಬ್ಬರ ಪುತ್ರಿಯರ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರನ್ನು ಎಲ್ಲಿಯು ಬಳಸದೇ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಮ್ಮೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಟಿವಿ ಶೋ ವೇಳೆ ಪತ್ನಿಗೆ ಪ್ರಪೋಸ್ ಮಾಡಿದ ಪಾಕ್ ಕ್ರಿಕೆಟಿಗ ವಾಸೀಂ ಅಕ್ರಂ