Select Your Language

Notifications

webdunia
webdunia
webdunia
webdunia

ಶ್ರೀನಾಥ್‌ಗಾಗಿ ಪತ್ನಿ ಗೀತಾ ಮಾಡಿದ್ದೇನು ಗೊತ್ತಾ?

ಶ್ರೀನಾಥ್‌ಗಾಗಿ ಪತ್ನಿ ಗೀತಾ ಮಾಡಿದ್ದೇನು ಗೊತ್ತಾ?
ಬೆಂಗಳೂರು , ಬುಧವಾರ, 25 ಮೇ 2016 (10:19 IST)
ಪತಿಗಾಗಿ ಪತ್ನಿ ನಿರ್ಮಾಪಕಿಯಾಗೋದು, ಹೆಂಡತಿಗಾಗಿ ಗಂಡ ಸಿನಿಮಾ ಮಾಡೋದು ಸಿನಿಮಾರಂಗದಲ್ಲಿ ಚಿತ್ರ ಮಾಡೋದು ಹೊಸದೇನಲ್ಲ. ಹಿರಿಯ ನಟ ಶ್ರೀನಾಥ್ ಪತ್ನಿ ಗೀತಾ ಶ್ರೀನಾಥ್ ಅವರು ಕೂಡ ಈ ವಿಚಾರದಲ್ಲಿ ಹೊರತಾಗಿಲ್ಲ. ಪತಿಗಾಗಿ ಇದೀಗ ಸುಳಿ ಅನ್ನೋ ಸಿನಿಮಾ ಮಾಡಿದ್ದಾರೆ ಗೀತಾ ಶ್ರೀನಾಥ್.
ಬಾಲಿವುಡ್ ನ ಹಿರಿಯ ನಟರಾದ ಅಮಿತಾಬ್ ಬಚ್ಚನ್, ಮಿಧುನ್ ಚಕ್ರವರ್ತಿ ಮುಂತಾದವರು ತಮ್ಮ ಹಿರಿಯ ವಯಸ್ಸನಲ್ಲೂ ಅನೇಕ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಹಾಗಾಗಿ ಪ್ರಣಯ ರಾಜ ಶ್ರೀನಾಥ್ ಅವರಿಗಾಗಿಯೂ ಒಂದು ಸಿನಿಮಾ ಯಾಕೆ ಮಾಡಬಾರದು ಅಂತಾ ಯೋಚಿಸಿ ಶ್ರೀನಾಥ್ ಪತ್ನಿ ಗೀತಾ ಶ್ರೀನಾಥ್ ಸಿನಿಮಾ ಮಾಡಿದ್ದಾರೆ. 
 
ಅಂದ್ಹಾಗೆ ಈ ಸಿನಿಮಾವನ್ನು ಗೀತಾ ಅವರು ಸಹ ನಿರ್ಮಾಣ ಮಾಡಿದ್ದಾರೆ. ಅವರೇ ಮುಂದೆ ನಿಂತು ಸಿನಿಮಾದ ಅನೇಕ ಕೆಲಸಗಳನ್ನು ಮಾಡಿದ್ದಾರಂತೆ.
 
ಸಿನಿಮಾದಲ್ಲಿ ಶ್ರೀನಾಥ್ ಅವರನ್ನು ವಿಭಿನ್ನವಾಗಿ ಹಾಗೇ ಇದುವೆರೆಗೂ ಅವರು ಅಭಿನಯಿಸದೇ ಇರುವಂತಹ ಪಾತ್ರದಲ್ಲಿ ತೋರಿಸಿದ್ದಾರಂತೆ. ಈ ಪಾತ್ರಕ್ಕಾಗಿ ಶ್ರೀನಾಥ್ ಅವರ ಲುಕ್ ನ್ನು ಸಂಪೂರ್ಣವಾಗಿ ಚೇಂಜ್ ಮಾಡಿದ್ದಾರಂತೆ.ಪಿ.ಹೆಚ್. ವಿಶ್ವನಾಥ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.ಟಿ.ಎಸ್. ಸತ್ಯನಾರಾಯಣ ನಿರ್ಮಾಣದಲ್ಲಿ ಗೀತಾ ಅವರೊಂದಿಗೆ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಒಕೆ ಜಾನು ಸಿನಿಮಾ ತಂಡಕ್ಕೆ ಟ್ರೀಟ್ ಕೊಡಿಸಿದ ಶ್ರದ್ಧಾ ಕಪೂರ್