ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತಮ್ಮ ಪೋಷಕರನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೆಲ ದಿನದ ಹಿಂದೆ ಶ್ರದ್ಧಾ ತಮ್ಮ ಪೋಷಕರನ್ನು ಬಿಟ್ಟು ಪ್ರತ್ಯೇಕವಾಗಿ ನೆಲೆಸಲಿದ್ದಾರೆ ಎಂಬುದರ ಕುರಿತು ಗಾಸಿಪ್ ಹರಡಿತ್ತು.. ಆದ್ರೆ ಇದಕ್ಕೆಲ್ಲ ತೆರೆ ಎಳೆದಿದ್ದಾರೆ ಶ್ರಧ್ಧಾ ಕಪೂರ್
'ನಾನು ಬೇರೆ ನಿವಾಸಕ್ಕೆ ಶಿಫ್ಟ್ ಆಗ್ತಿಲ್ಲ.. ಇದು ನಿಜವಲ್ಲ, ನಾನು ನನ್ನ ಪೋಷಕರನ್ನು ತುಂಬಾ ಇಷ್ಟಪಡುತ್ತೇನೆ.. ಅವರನ್ನು ಬಿಟ್ಟು ನಾನು ಊಹಿಸಲು ಸಾಧ್ಯವಿಲ್ಲ'..
ಆದರೆ 'ನಾನು ಅಪಾರ್ಟಮೆಂಟ್ ಖರೀದಿ ಮಾಡಿದ್ದೇನೆ. ಆದರೆ ಅಲ್ಲಿಗೆ ಶಿಫ್ಟ್ ಆಗ್ತಿಲ್ಲ, ಎಂದಿಗೂ ನನ್ನ ಪೋಷಕರ ಜತೆ ಇರಲು ಇಚ್ಛಿಸುತ್ತೇನೆ' ಎಂದು ನಟಿ ಶ್ರದ್ಧಾ ಕಪೂರ್ ತಿಳಿಸಿದ್ದಾರೆ.
ಬಾಘೀ ಚಿತ್ರದ ಯಶಸ್ಸಿನಲ್ಲಿರೋ ಶ್ರದ್ಧಾ, ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವುದನ್ನು ಕಂಡು ಎಂಜಾಯ್ ಮಾಡುತ್ತಿದ್ದಾರೆ. ಬಾಘೀ ಚಿತ್ರದ ಬಳಿಕ ಸದ್ಯ ಶ್ರದ್ಧಾ ಕಪೂರ್ ಓಕೆ ಜಾನು ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾಳೆ ಶ್ರದ್ಧಾ..