Select Your Language

Notifications

webdunia
webdunia
webdunia
webdunia

ಶ್ರದ್ಧಾ ಕಪೂರ್ ಮೇಲಿನ ಗಾಸಿಪ್ ನಂಬಬೇಡಿ!

ಶ್ರದ್ಧಾ ಕಪೂರ್ ಮೇಲಿನ ಗಾಸಿಪ್ ನಂಬಬೇಡಿ!
Mumbai , ಮಂಗಳವಾರ, 20 ಡಿಸೆಂಬರ್ 2016 (10:37 IST)
ಬಾಲಿವುಡ್ ಬೆಡಗಿ ಶ್ರದ್ಧಾಕಪೂರ್‌ಗೆ ಹೆಲ್ಪಿಂಗ್ ನೇಚರ್ ಸ್ವಲ್ಪ ಜಾಸ್ತಿನೇ ಇದೆ. ಈ ಸಲುವಾಗಿಯೇ ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆ ಸೇರಿದ್ದಾರೆಂದು ಗುಸುಗುಸು ಕೇಳಿಬರುತ್ತಿದೆ. ಅಸಲಿ ವಿಷಯ ಏನೆಂದರೆ... ಶ್ರದ್ಧಾ ಕಪೂರ್, ಕಾಫಿ ವಿತ್ ಕರಣ್ ಸೀಜನ್ 5, ಕಾಮೆಡಿ ನೈಟ್ಸ್ ಬಚಾವೋ ಭಾಗವಹಿಸಬೇಕಾಗಿತ್ತು.
 
ಕಾಫಿ ವಿತ್ ಕರಣ್ ಶೋನಲ್ಲಿ ಪಾಲ್ಗೊಂಡು ಧೋನಿ: ಅನ್ ಟೋಲ್ಡ್ ಸ್ಟೋರಿ ಹೀರೋ ಸುಶಾಂತ್ ಸಿಂಗ್ ರಾಜ್‍ಪುತ್‌ರೊಂದಿಗೆ ಒಂದು ಕಪ್ ಕಾಫಿ ಕುಡಿದು...ಅದೆಷ್ಟೋ ವಿಚಾರಗಳನ್ನು ಹಂಚಿಕೊಳ್ಳಬೇಕಾಗಿತ್ತು. ಆದರೆ ಈಗ ಆಸ್ಪತ್ರೆಯಲ್ಲಿದ್ದೀನಿ. ಯಾವುದೇ ಕಾರಣಕ್ಕೂ ಶೋನಲ್ಲಿ ಪಾಲ್ಗೊಳ್ಳಲು ಆಗಲ್ಲ ಎಂದಿದ್ದಾರಂತೆ.
 
ಈ ರೀತಿಯಾಗಿ ಶೋ ನಿರ್ಮಾಪಕರು ಹೇಳಿದ್ದನ್ನು ಕೆಲವರು ಬೇರೆ ಅರ್ಥದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಶ್ರದ್ಧಾ ಕಪೂರ್‌ ಚೆನ್ನಾಗಿಯೇ ಇದ್ದಾರೆ. ಆಶಿಕಿ 2 ಚಿತ್ರದ ಹೀರೋಯಿನ್ ಡ್ರೈವರ್‍‍ಗೆ ಹೃದಯಾಘಾತವಾದ ಕಾರಣ, ಶ್ರದ್ಧಾ ಬಂದಿಲ್ಲ. ಅವರ ಕುಟುಂಬಕ್ಕೆ ಸಹಾಯ ಮಾಡಲು, ಅವರಿಗೆ ಧೈರ್ಯ ತುಂಬಲು ಶ್ರದ್ಧಾ ಈ ನಿರ್ಧಾರಕ್ಕೆ ಬಂದರಂತೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳ ಸ್ಫೂರ್ತಿ ಹೆಚ್ಚಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಚ್ಛೇದನ ಬಳಿಕ ಆತನಿಗೆ ಹತ್ತಿರವಾಗುತ್ತಿರುವ ನಟಿ!