Webdunia - Bharat's app for daily news and videos

Install App

ಮುಂದಿನ ಕೆಲ ವರ್ಷ ಬ್ಯುಸಿಯಾಗಿಲಿದ್ದಾರೆ ಶಿವರಾಜ್ ಕಮಾರ್

Webdunia
ಗುರುವಾರ, 26 ಮೇ 2016 (10:31 IST)
ನಟ ಶಿವರಾಜ್ ಕುಮಾರ್ ಈ ವರ್ಷ ಫುಲ್ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ಶಿವಲಿಂಗ, ಕಿಲ್ಲಂಗ್ ವೀರಪ್ಪನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಶಿವರಾಜ್ ಕುಮಾರ್ ಈ ಬಾರಿ ತಮ್ಮ ಕೈಯಲ್ಲಿ ಒಂದಷ್ಟು ಸಿನಿಮಾಗಳನ್ನು ಹಿಡಿದುಕೊಂಡಿದ್ದಾರೆ. ಆ ಎಲ್ಲಾ ಸಿನಿಮಾಗಳು ಕೂಡ ಶಿವಣ್ಣ ಈ ಹಿಂದೆ ಮಾಡಿದ ಸಿನಿಮಾಗಳಿಗಿಂತ ಭಿನ್ನವಾದ ಸಿನಿಮಾಗಳು.
 ಅಂದ್ಹಾಗೆ ಸದ್ಯ ಶಿವರಾಜ್ ಕುಮಾರ್ ಅವರು ಬಂಗಾರ ಹಾಗೂ ಶ್ರೀಕಂಠ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೇ ಶಿವಣ್ಣ ಅಭಿನಯಿಸುತ್ತಿರುವ ಸಂತೆಯಲ್ಲಿ ನಿಂತ ಕಬೀರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. 
 
ಇದಲ್ಲದೇ ಶಿವಣ್ಣ ಕೈಯಲ್ಲಿ ಇನ್ನೂ ಅನೇಕ ಸಿನಿಮಾಗಳಿವೆ.ಅಂದ್ಹಾಗೆ ಶಿವರಾಜ್ ಕುಮಾರ್ ತರುಣ್ ಶಿವಪ್ಪ ಅವರ ಲೀಡರ್ ಸಿನಿಮಾದಲ್ಲಿಯೂ ಅಭಿನಯಿಸಲಿದ್ದಾರಂತೆ. ಅಂದ್ಹಾಗೆ ಈ ಸಿನಿಮಾದಲ್ಲಿ ಶಿವಣ್ಣ ಅವರದ್ದು ಕಂಪ್ಲೀಟ್ ವಿಭಿನ್ನವಾದ ಪಾತ್ರವಂತೆ. ಶಿವಣ್ಣ ಸಾಲ್ಟ್ ಆಂಡ್ ಪೆಪ್ಪರ್ ಲುಕ್ ನಲ್ಲಿ ಮಿಂಚಲಿದ್ದಾರಂತೆ.
 
ಅಂದ್ಹಾಗೆ ಈ ಸಿನಿಮಾದಲ್ಲಿ ಮತ್ತೊಂದು ವಿಶೇಷತೆ ಇದೆ. ಶಿವರಾಜ್ ಕುಮಾರ್ ಅವರ ಸಂಬಂಧಿ ವಿಜಯ್ ರಾಘವೇಂದ್ರ ಅವರು ಕೂಡ ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಜೊತೆ ಅಭಿನಯಿಸುತ್ತಿದ್ದಾರೆ. ಮೊನ್ನೆಯಷ್ಟೇ ಶಿವಣ್ಣ ಹಾಗೂ ಶ್ರೀಮುರಳಿ ಜೊತೆಯಾಗಿ ಅಭಿನಯಿಸುತ್ತಾರೆ ಅನ್ನೋದು ಖಚಿತವಾಗಿತ್ತು. ಇದೀಗ ಶ್ರೀಮುರಳಿ ಸಹೋದರ ವಿಜಯ್ ರಾಘವೇಂದ್ರ ಕೂಡ ಮಾವನ ಜೊತೆ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರೋದು ಕನ್ಫರ್ಮ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

ನಟನಾಗಿ ಗೆದ್ದ ಯುವ ರಾಜ್ ಕುಮಾರ್: ಎಕ್ಕ ಸಿನಿಮಾ ಮೊದಲ ದಿನದ ಗಳಿಕೆಯೆಷ್ಟು

43ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಬೀಚ್‌ನಲ್ಲಿ ಪತಿ ಜತೆ ಬರ್ತಡೇ ಸೆಲೆಬ್ರೇಟ್‌

ಭಾಗ್ಯಲಕ್ಷ್ಮೀ ಸೀರಿಯಲ್‌, ಎಲ್ಲ ಗೊತ್ತಿರುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡ್ಬಾರ್ದು ಅಂತ ಗೊತ್ತಿಲ್ವಾ, ಟ್ರೋಲ್‌

ಎಕ್ಕ ಮೂವಿ ಹೇಗಿದೆ: ಫಸ್ಟ್ ಹಾಫ್ ನೋಡಿದ ಪ್ರೇಕ್ಷಕರು ಏನಂತಿದ್ದಾರೆ

ಮುಂದಿನ ಸುದ್ದಿ
Show comments