ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

Krishnaveni K
ಶನಿವಾರ, 28 ಜೂನ್ 2025 (12:02 IST)
Photo Credit: X
ಮುಂಬೈ: ಬಾಲಿವುಡ್ ನಟಿ ಶೆಫಾಲಿ ಜೆರಿವಾಲಾ ಸಾವು ಸಹಜವೇ ಎಂಬ ಬಗ್ಗೆ ಅನುಮಾನ ಶುರುವಾಗಿದ್ದು ಇದೀಗ ಪೊಲೀಸರು ನಾನಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ತಡರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಶೆಫಾಲಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆ ವೇಳೆಗಾಗಲೇ ಆಕೆ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಯಿತು. ಇದೀಗ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೆಫಾಲಿ ಈಗಾಗಲೇ ಮೊದಲ ಪತಿಯಿಂದ ವಿಚ್ಛೇದನ ಪಡೆದು ಎರಡನೇ ಮದುವೆಯಾಗಿದ್ದರು. ಆಕೆಯ ಪತಿ ನಿನ್ನೆ ಘಟನೆ ಬೆನ್ನಲ್ಲೇ ಆಸ್ಪತ್ರೆಗೆ ಓಡೋಡಿ ಬಂದಿದ್ದರು. ಇದೀಗ ಬಲ್ಲ ಮಾಹಿತಿಗಳ ಪ್ರಕಾರ ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

ಹಾಗಿದ್ದರೂ ಆರೋಗ್ಯವಾಗಿದ್ದ ನಟಿಗೆ ಇದ್ದಕ್ಕಿದ್ದ ಹಾಗೆ ಹೃದಯಾಘಾತವಾಗುವಷ್ಟು ಏನಾಯಿತು ಎಂದು ತನಿಖೆ ನಡೆಯುತ್ತಿದೆ. ಇತ್ತೀಚೆಗಷ್ಟೇ ಆಕೆ ಫೋಟೋ ಶೂಟ್ ಕೂಡಾ ಮಾಡಿಸಿಕೊಂಡಿದ್ದರು. ಈಗ ಇನ್ನಿಲ್ಲ ಎಂದರೆ ನಂಬಲು ಕಷ್ಟವಾಗುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

ನಿಶ್ಚಿತಾರ್ಥ ಮಾಡಿಕೊಂಡ ಉಗ್ರಂ ಮಂಜು ಜೋಡಿ ಭೇಟಿಯಾದ ಗೌತಮಿ ಜಾಧವ್‌

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಮುಂದಿನ ಸುದ್ದಿ
Show comments