Webdunia - Bharat's app for daily news and videos

Install App

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

Krishnaveni K
ಶನಿವಾರ, 28 ಜೂನ್ 2025 (08:51 IST)
Photo Credit: X
ಬೆಂಗಳೂರು: ಹುಡುಗರು ಸಿನಿಮಾದಲ್ಲಿ ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ ಹಾಡಿಗೆ ಕುಣಿದು ಪಡ್ಡೆ ಹೈಕಳ ನಿದ್ದೆಗೆಡಿಸಿದ್ದ ನಟಿ ಶೆಫಾಲಿ ಜೆರಿವಾಲಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮುಂಬೈನ ಅಂಧೇರಿಯಲ್ಲಿ ನೆಲೆಸಿದ್ದ ಶೆಫಾಲಿ ನಿನ್ನೆ ತಡರಾತ್ರಿ ಎದೆನೋವಿಗೊಳಗಾಗಿದ್ದರು. ಹೀಗಾಗಿ ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹಾಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಪರೀಕ್ಷಿಸಿದ ವೈದ್ಯರು ಸಾವು ಖಚಿತಪಡಿಸಿದ್ದಾರೆ.

ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಲಾಗುತ್ತಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತಷ್ಟೇ. 1982 ರಲ್ಲಿ ಜನಿಸಿದ್ದ ಶೆಫಾಲಿ ಮುಂಬೈ ಮೂಲದವರು. ಮೊದಲ ಪತಿಯಿಂದ ವಿಚ್ಛೇದನ ಪಡೆದ ಅವರು ಎರಡನೇ ವಿವಾಹವಾಗಿದ್ದರು.

ಕನ್ನಡದ ಪಂಕಜಾ ಹಾಡಲ್ಲದೆ, ಹಿಂದಿಯಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇದಲ್ಲದೆ ಬಿಗ್ ಬಾಸ್ ಶೋನಲ್ಲೂ ಸ್ಪರ್ಧಿಸಿ ಜನರ ಮನಸ್ಸು ಗೆದ್ದಿದ್ದರು. ಅವರ ಸಾವಿನ ಸುದ್ದಿ ಅಭಿಮಾನಿಗಳು ಆಘಾತಕ್ಕೀಡು ಮಾಡಿದೆ. ಸೋಷಿಯಲ್ ಮೀಡಿಯಾ ಮೂಲಕ ಜನರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಪಂಕಜಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜೆರಿವಾಲಾ ಇನ್ನಿಲ್ಲ

ಯೂಟರ್ನ್‌ ಬೆಡಗಿ ಶ್ರದ್ದಾ ಹಾಟ್‌ ಲುಕ್‌ಗೆ ಪಡ್ಡೆ ಹೈಕಳು ಸುಸ್ತು

ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

ಮುಂದಿನ ಸುದ್ದಿ
Show comments