Webdunia - Bharat's app for daily news and videos

Install App

ಶಾರುಖ್ ಖಾನ್ ಪುತ್ರಿ ಸುಹಾನಾ ಖರೀದಿಸಿದ ಆಸ್ತಿ ಬೆಲೆ ಅಬ್ಬಬ್ಬಾ!

Krishnaveni K
ಶನಿವಾರ, 24 ಫೆಬ್ರವರಿ 2024 (09:10 IST)
Photo Courtesy: Twitter
ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಪುತ್ರಿ ಸುಹಾನಾ ಖಾನ್ ಭಾರೀ ಬೆಲೆಯ ಆಸ್ತಿ ಖರೀದಿ ಮಾಡಿದ್ದಾರೆ. ಈ ಆಸ್ತಿಯ ಒಟ್ಟು ಮೌಲ್ಯ ಕೇಳಿದರೆ ದಂಗಾಗುತ್ತೀರಿ.

ಮುಂಬೈ ಬಳಿ ಅಲಿಭಾಗ್ ನಲ್ಲಿ ಫಾರ್ಮ್ ಲ್ಯಾಂಡ್ ಒಂದನ್ನು ಸುಹಾನಾ ಖರೀದಿ ಮಾಡಿದ್ದಾರೆ. ಈ ಆಸ್ತಿಯ ಮೌಲ್ಯ ಬರೋಬ್ಬರಿ 12 ಕೋಟಿ ರೂ. ಈಗಾಗಲೇ ಜಮೀನು ನೋಂದಣಿ ಮಾಡಿಸಿಕೊಳ್ಳಲು 57 ಲಕ್ಷ ರೂ. ಪಾವತಿ ಮಾಡಿದ್ದಾರೆ. ಈ ಜಮೀನಿನ ಅಳತೆ 78.361 ಚದರ ಅಡಿ. ಸುಮಾರು ಎರಡು ಎಕರೆಯಷ್ಟು ದೊಡ್ಡದಾದ ಭೂಮಿ.

ಇತ್ತೀಚೆಗಷ್ಟೇ ಸುಹಾನಾ ಖಾನ್ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ದಿ ಆರ್ಚಿಸ್ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದರು. ಸಾಕಷ್ಟು ಆಫರ್ ಗಳೂ ಆಕೆಗಿವೆ. ಇಂತಹ ಸಮದಲ್ಲೇ ಶಾರುಖ್ ಪುತ್ರಿ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಅಲಿಭಾಗ್ ನಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಜಮೀನು ಹೊಂದಿದ್ದಾರೆ. ಆ ಲಿಸ್ಟ್ ಗೆ ಸುಹಾನಾ ಕೂಡಾ ಸೇರಿಕೊಂಡಿದ್ದಾರೆ.

ಈ ಮೂಲಕ ಶಾರುಖ್ ಖಾನ್ ಕುಟುಂಬದ ಎಲ್ಲರೂ ತಮ್ಮದೇ ಉದ್ಯಮದಲ್ಲಿ ತೊಡಗಿಸಿಕೊಂಡಂತಾಗಿದೆ. ಈಗಾಗಲೇ ಶಾರುಖ್ ತಮ್ಮದೇ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಪತ್ನಿ ಗೌರಿ ಖಾನ್ ಒಳಾಂಗಣ ವಿನ್ಯಾಸಕಿಯಾಗಿದ್ದು ತಮ್ಮದೇ ವ್ಯವಹಾರ ಹೊಂದಿದ್ದಾರೆ. ಪುತ್ರ ಆರ್ಯನ್ ಖಾನ್ ತನ್ನದೇ ಬ್ರ್ಯಾಂಡ್ ನ ಬಟ್ಟೆ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ.  ಇದೀಗ ಸುಹಾನಾ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಶಾರುಖ್ ಕುಟುಂಬದ ಎಲ್ಲರೂ ಸಿನಿಮಾ ಹೊರತಾಗಿಯೂ ತಮ್ಮದೇ ವ್ಯವಹಾರ ಹೊಂದಿದಂತಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗುಜರಾತ್‌ನಿಂದ ಎಮ್ಮೆ ಖರೀದಿಸಲು ಹೋಗಿ ಟೋಪಿ ಹಾಕಿಕೊಂಡ ನಿರ್ದೇಶಕ ಜೋಗಿ ಪ್ರೇಮ್

ತಮಿಳು ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಬರೆದ ಕೂಲಿ

46ವರ್ಷಗಳ ಬಳಿಕ ಸ್ಕ್ರಿನ್ ಹಂಚಿಕೊಳ್ಳಲಿದ್ದಾರೆ ದಕ್ಷಿಣ ಭಾರತದ ಸ್ಟಾರ್ ನಟರು

ದರ್ಶನ್ ಭೇಟಿಯಾದ ಬೆನ್ನಲ್ಲೇ ಡೆವಿಲ್‌ ಸಿನಿಮಾದ ಬಿಗ್‌ಅಪ್ಡೇಟ್‌ ಕೊಟ್ಟ ವಿಜಯಲಕ್ಷ್ಮಿ

ವ್ಯಕ್ತಿಯೊಬ್ಬರಿಗೆ ರಶ್ಮಿಕಾ ಶೇಕ್‌ಹ್ಯಾಂಡ್ ಕೊಟ್ರೆ ವಿಜಯ್ ದೇವರಕೊಂಡ ಹೀಗೇ ನಡೆದುಕೊಳ್ಳುವುದಾ, Viral Video

ಮುಂದಿನ ಸುದ್ದಿ
Show comments