ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಇಂದು ರಿಲೀಸ್ ಆಗಿದೆ. ಈ ಚಿತ್ರವನ್ನು ಶಾರುಖ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಮುಂಜಾನೆಯಿಂದಲೇ ಶೋಗಳನ್ನು ಆಯೋಜನೆ ಮಾಡಲಾಗಿದೆ. ಪಠಾಣ್ ಚಿತ್ರವನ್ನ ನೋಡಿದ ಪ್ರೇಕ್ಷಕರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಶಾರುಖ್ ಖಾನ್ ಹಾಗೂ ಜಾನ್ ಅಬ್ರಾಹಂ ಅವರ ಮುಖಾಮುಖಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಶಾರುಖ್ ಖಾನ್ ಅವರು ನಾಲ್ಕು ವರ್ಷಗಳ ಬಳಿಕ ದೊಡ್ಡ ಪರದೆಗೆ ಮರಳಿದ್ದಾರೆ. ಅವರು ಮಾಸ್ ಅವತಾರದಲ್ಲಿ ಮರಳಿದ್ದಾರೆ ಎಂಬುದಕ್ಕೆ ಟ್ರೇಲರ್ನಲ್ಲಿ ಸಾಕ್ಷ್ಯ ಸಿಕ್ಕಿತ್ತು. ಸಿನಿಮಾ ಕೂಡ ಅದೇ ರೀತಿ ಇದೆ ಎಂದು ಫ್ಯಾನ್ಸ್ ಹೇಳ್ತಿದ್ದಾರೆ.