56 ಕೋಟಿ ರೂಪಾಯಿ ಬೆಲೆ ಬಾಳುವ ಮನೆಯನ್ನು ಖರೀದಿಸಿದ ಶಾಹಿದ್ ಕಪೂರ್...

Webdunia
ಸೋಮವಾರ, 23 ಜುಲೈ 2018 (18:54 IST)
ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಅವರ ಮಡದಿ ಮೀರಾ ರಜಪೂತ್ ಹೊಸ ಮನೆಗೆ ತೆರಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಲು ಪ್ರಾರಂಭವಾಗಿ 6 ತಿಂಗಳಾಗಿತ್ತು. ಅಂತಿಮವಾಗಿ ವೋರ್ಲಿಯಲ್ಲಿ ಸುಮಾರು 56 ಕೋಟಿ ರೂಪಾಯಿ ಬೆಲೆ ಬಾಳುವ ಡ್ಯುಪ್ಲೆಕ್ಸ್ ಅನ್ನು ಖರೀದಿಸಿರುವುದಾಗಿ ಮೂಲಗಳು ತಿಳಿಸಿವೆ.
ಜುಹುವಿನಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ದಂಪತಿಗಳು ಕಳೆದ ಆರು ತಿಂಗಳಿನಿಂದ ಮನೆಯ ಹುಡುಕಾಟದಲ್ಲಿದ್ದು ಅಂತಿಮವಾಗಿ ವೋರ್ಲಿಯಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ. ಮೂಲಗಳ ಪ್ರಕಾರ ಅವರ ಹಳೆಯ ಮನೆಯ ಹೊರಗೆ ಬೆಳೆಯುತ್ತಿರುವ ವೇಶ್ಯಾವಾಟಿಕೆಯೇ ಅವರು ಮನೆ ಬದಲಾಯಿಸಲು ಕಾರಣ. ಆದರೆ ಶಾಹಿದ್ ಅಥವಾ ಅವರ ಪತ್ನಿ ಈ ಕುರಿತಂತೆ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲವಾದರೂ ವರದಿಗಳು ಮತ್ತು ಮೂಲಗಳು ಇದೇ ಕಾರಣವನ್ನು ಊಹಿಸಿವೆ.
 
ಶಾಹಿದ್ ಅವರ ಹೊಸ ನೆರೆ ಹೊರೆಯವರಾಗಿ ಅಕ್ಷಯ್ ಕುಮಾರ್-ಟ್ವಿಂಕಲ್ ಖನ್ನಾ ಮತ್ತು ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ವಾಸಿಸುತ್ತಿರುವುದು ಶುಭ ಸುದ್ದಿಯಾಗಿದೆ. ಆರು ತಿಂಗಳ ಬಸುರಿಯಾಗಿರುವ ಮೀರಾ ಮತ್ತು ಶಾಹಿದ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಮುಂದಿನ ಸುದ್ದಿ
Show comments