Select Your Language

Notifications

webdunia
webdunia
webdunia
webdunia

ಪದ್ಮಾವತಿ ಸಿನಿಮಾ ಸೆಟ್ ಗೆ ಭೇಟಿ ಕೊಟ್ಟ ಶಾರುಖ್ ಖಾನ್

ಪದ್ಮಾವತಿ ಸಿನಿಮಾ ಸೆಟ್ ಗೆ ಭೇಟಿ ಕೊಟ್ಟ ಶಾರುಖ್ ಖಾನ್
Mumbai , ಗುರುವಾರ, 17 ನವೆಂಬರ್ 2016 (13:29 IST)
ಮುಂಬೈ; ದೀಪಿಕಾ ಪಡುಕೋಣೆ, ಶಾಹಿದ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪದ್ಮಾವತಿ ಸಿನಿಮಾ ಸೆಟ್ ಗೆ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಭೇಟಿ ಕೊಟ್ಟಿದ್ದಾರೆ.

ಅಸಲಿ ವಿಷಯ ಏನೆಂದರೆ, ಡಿಯರ್ ಜಿಂದಗಿ ಚಿತ್ರದ ಪ್ರಚಾರಕ್ಕೆ ಶಾರುಖ್ ಮೆಹಬೂಬ್ ಸ್ಟುಡಿಯೋಗೆ ಆಗಮಿಸಿದ್ದರು. ಅದೇ ವೇಳೆ ಅಲ್ಲಿ ಸ್ನೇಹಿತ ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತಿ ಶೂಟಿಂಗ್ ನಡೆಯುತ್ತಿತ್ತು.

ಹೀಗಾಗಿ ಶಾರುಖ್ ಶೂಟಿಂಗ್ ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ. ತಮ್ಮ ಜತೆಗೆ ಡಿಯರ್ ಜಿಂದಗಿ ನಾಯಕಿ ಆಲಿಯಾ ಭಟ್ ಅವರನ್ನೂ ಕರೆದೊಯ್ದಿದ್ದಾರೆ. ಇಬ್ಬರನ್ನೂ ಜತೆಯಾಗಿ ನೋಡಿ ಬನ್ಸಾಲಿ ಬಹಳ ಖುಷಿಯಾಗಿದ್ದಾರೆ. ಅನಿರೀಕ್ಷಿತವಾಗಿ ಬಂದ ಮಿತ್ರ ಶಾರುಖ್ ಗೆ ಪದ್ಮಾವತಿ ಚಿತ್ರಕ್ಕಾಗಿ ಮಾಡಿದ ವಿಶೇಷ ಸೆಟ್ ತೋರಿಸಿದರಂತೆ ಬನ್ಸಾಲಿ. ಸುಮಾರು ಅರ್ಧಗಂಟೆ ಅಲ್ಲಿ ಕಾಲ ಕಳೆದ ಶಾರುಖ್ ಹಿಂತುರಿಗಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎರಡನೇ ಬಾರಿಗೆ ಪೀಪಲ್ಸ್ ಚಾಯ್ಸ್ ಅವಾರ್ಡ್ ಗೆ ನಾಮನಿರ್ದೇಶನಗೊಂಡ ಪ್ರಿಯಾಂಕ ಚೋಪ್ರಾ