Select Your Language

Notifications

webdunia
webdunia
webdunia
webdunia

ಶಾರುಖ್ ಖಾನ್ ಅಭಿನಯದ ಡಿಯರ್ ಜಿಂದಗಿ ಇಂದು ಬಿಡುಗಡೆ

ಶಾರುಖ್ ಖಾನ್ ಅಭಿನಯದ ಡಿಯರ್ ಜಿಂದಗಿ ಇಂದು ಬಿಡುಗಡೆ
Mumbai , ಶುಕ್ರವಾರ, 25 ನವೆಂಬರ್ 2016 (11:01 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಮತ್ತು ಅಲಿಯಾ ಭಟ್ ಅಭಿನಯದ ಬಹುನಿರೀಕ್ಷಿತ ಡಿಯರ್ ಜಿಂದಗಿ ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

ಈಗಾಗಲೇ ಅಮೆರಿಕಾದಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿರುವ ಈ ಚಿತ್ರ ಭಾರತದಲ್ಲಿ ಎಷ್ಟು ಇಷ್ಟವಾಗುತ್ತದೆ ಎಂದು ನೋಡಬೇಕಿದೆ. ಶಾರುಖ್, ಅಲಿಯಾ ಜತೆ ಗೌರಿ ಶಿಂದೆ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದೆ.

ಈಗಾಗಲೇ ಇದರ ಹಾಡುಗಳು ಸೂಪರ್ ಹಿಟ್ ಆಗಿವೆ.  ಭಗ್ನ ಪ್ರೇಮಿಯಾಗಿ ಅಲಿಯಾ ಭಟ್ ಕಾಣಿಸಿಕೊಂಡಿದ್ದು, ಮತ್ತು ಲವ್ ಗುರು ಪಾತ್ರದಲ್ಲಿ ಶಾರುಖ್ ಮಿಂಚಿದ್ದಾರೆ. ಬಿಡುಗಡೆಗೂ ಮೊದಲೇ ಸಾಕಷ್ಟು ಸುದ್ದಿ ಮಾಡಿದ್ದ ಸಿನಿಮಾವಿದು. ಹಾಗಾಗಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯೋದು ಖಚಿತ ಎನ್ನುವುದು ಬಾಲಿವುಡ್ ಪಂಡಿತರ ಲೆಕ್ಕಾಚಾರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತೇರೇ ನಾಮ್ 2 ಮಾಡುವ ಯೋಜನೆಯಿದೆ ಎಂದ ನಿರ್ದೇಶಕ ಸತೀಶ್ ಕೌಶಿಕ್