Select Your Language

Notifications

webdunia
webdunia
webdunia
webdunia

ಬಾಲಿವುಡ್ ಬಾದ್ ಶಾ ಶಾರುಖ್ ಫೋನ್ ನಂಬರ್ ಗೊತ್ತಾ..?

ಬಾಲಿವುಡ್ ಬಾದ್ ಶಾ ಶಾರುಖ್ ಫೋನ್ ನಂಬರ್ ಗೊತ್ತಾ..?
ಮುಂಬೈ , ಮಂಗಳವಾರ, 18 ಜುಲೈ 2017 (06:56 IST)
ಮುಂಬೈ: ಸಾಮಾನ್ಯವಾಗಿ ಸಿನಿಮಾ ತಾರೆಯರು ತಮ್ಮ ಫೋನ್ ನಂಬರ್ ಗಳನ್ನು ಎಲ್ಲೂ ಬಹಿರಂಗ ಪಡಿಸಲ್ಲ. ಅದರಲ್ಲೂ ಅವರ ವೈಯಕ್ತಿಕ ಫೋನ್ ನಂಬರ್ ಸಿಗೂದೂ ಕಷ್ಟ. ಆದರೆ ಬಾಲಿವುಡ್ ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ಫೋನ್ ನಂಬರ್ ನ್ನು ಜಗಜ್ಜಾಹೀರು ಮಾಡಿದ್ದಾರೆ. ಅಷ್ಟೇ ಅಲ್ಲ ಹಲವಾರು ಕುತೂಹಲಕರ ಸಂಗತಿಗಳನ್ನು ಅವರು ಬಹಿರಂಗಪಡಿಸಿದ್ದಾರೆ.
 
ತಮ್ಮ ವೈಯಕ್ತಿಕ ಫೋನ್ ನಂಬರ್ ನ್ನು ಹೇಳಿರುವ ಶಾರುಖ್, 55599 60321 ಇದೇ ತಮ್ಮ ಫೋನ್ ನಂಬರ್ ಎಂದು ಹೇಳಿದ್ದಾರೆ. ಅಲ್ಲದೇ ಅರ್ಧ ರಾತ್ರಿ ಬಳಿಕ ಯಾವಾಗ ಬೇಕಾದರೂ ಕಾಲ್ ಮಾಡಬಹುದು. ನಾನು ತಪ್ಪದೇ ಫೋನ್ ರಿಸೀವ್ ಮಾಡುತ್ತೇನೆ. ಒಂದೊಮೆ ರಿಸೀವ್ ಮಾಡಲು ಸಾಧ್ಯವಾಗದಿದ್ದರೆ ಮೆಸೇಜ್ ಒಂದನ್ನು ಹಾಕಿ. ಒಂದು ಇಮೋಜಿ ಮೂಲಕ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ.
 
ಇನ್ನು ಶಾರುಖ್ ಇಷ್ಟು ದೊಡ್ಡ ಸ್ಟಾರ್ ಆದ್ರೂ ಅವರಬಳಿ ವೈಯಕ್ತಿಕವಾಗಿ ಚಾರ್ಟೆಡ್ ಫ್ಲೈಟ್ ಇಲ್ಲವಂತೆ.  ಆದರೆ ಖರೀದಿಸಲು ಇನ್ನಷ್ಟೇ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಶಾರುಖ್ ಗೆ ಟ್ಯಾಟೂ ಅಂದ್ರೆ ಪ್ರಾಣ ಹೋಗೋವಷ್ಟು ಭಯವಂತೆ. ಹಾಗಾಗಿ ಅವರು ಈ ವರೆಗೂ ಟ್ಯಾಟೂ ಹಾಕಿಸಿಕೊಂಡಿಲ್ಲವಂತೆ. ಜಬ್ ಹರಿ ಮೆಟ್ ಸೆಜಲ್ ಸಿನಿಮಾಗಾಗಿ ಬಲ ಭುಜ ಹಾಗೂ ಎದೆ ಮೇಲೆ ತಾತ್ಕಾಲಿಕ ಟ್ಯಾಟು ಹಾಕಿಸಿಕೊಂಡಿದ್ದಾಗಿ ಸ್ವತ: ಶಾರುಖ್ ತಿಳಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್ ಪೇಶಂಟ್ ಗಳಿಗಾಗಿ ತಲೆ ಕೂದಲನ್ನೇ ದಾನ ಮಾಡಿದ್ರು ಈ ನಟಿ