Select Your Language

Notifications

webdunia
webdunia
webdunia
webdunia

ನಟಿಯನ್ನ ಮಂಚಕ್ಕೆ ಕರೆದ ನಿರ್ಮಾಪಕನ ವಿರುದ್ಧ ಕೇಸ್

ನಟಿಯನ್ನ ಮಂಚಕ್ಕೆ ಕರೆದ ನಿರ್ಮಾಪಕನ ವಿರುದ್ಧ ಕೇಸ್
ಮುಂಬೈ , ಶನಿವಾರ, 25 ಮಾರ್ಚ್ 2017 (08:37 IST)
ಟಿವಿ ಶೋನಲ್ಲಿ ಮುಂದುವರೆಯಬೇಕೆಂದರೆ ನನ್ನ ಜೊತೆ ಸಂಬಂಧ ಇಟ್ಟುಕೊಳ್ಳಬೇಕೆಂದು ನಿರ್ಮಾಪಕನೊಬ್ಬ ಕಿರುತೆರೆ ನಟಿಗೆ ಬ್ಲಾಕ್ ಮೇಲ್ ಮಾಡಿದ್ದು, ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಮಾಪಕ ಸಂಜಯ್ ಕೊಹ್ಲಿ ವಿರುದ್ಧ ನಟಿಯೊಬ್ಬರು ದೂರು ನೀಡಿದ್ದು. ಕಾನೂನಿನನ್ವಯ ಕ್ರಮ ಜರುಗಿಸುವುದಾಗಿ ಇನ್ಸ್`ಪೆಕ್ಟರ್ ವಿ.ಡಿ. ಮಾಲಿ ತಿಳಿಸಿದ್ದಾರೆ. ಆದರೆ, ಇದುವರೆಗೆ ನಿರ್ಮಾಪಕನನ್ನ ಬಂಧಿಸಲಾಗಿಲ್ಲ.

ದೂರಿನ ಪ್ರಕಾರ, ನಟಿಗೆ ನಿರ್ಮಾಪಕ ನಿರಂತರ ಮಾನಸಿಕ ಕಿರುಕುಳ ನೀಡಿದ್ದು, ನನ್ನ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡರೆ ಮಾತ್ರ ನೀನು ಟಿವಿ ಶೋನಲ್ಲಿ ಮುಂದುವರೆಯಲು ಸಾಧ್ಯ ಎಂದು ಬ್ಲಾಕ್ ಮೇಲ್ ಮಾಡಿದ್ದನಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಮೂರು ಧಾರವಾಹಿಗಳಿಗೆ ನೋಟೀಸ್! ಏನಿದು ವಿವಾದ?