Select Your Language

Notifications

webdunia
webdunia
webdunia
webdunia

ದೀಪಿಕಾ ರಣಬೀರ್‌ ಮತ್ತೆ ಒಟ್ಟಿಗೆ ತೆರೆ ಮೇಲೆ ತರಲಿರುವ ಸಂಜಯ್ ಲೀಲಾ ಬನ್ಸಾಲಿ

ದೀಪಿಕಾ ರಣಬೀರ್‌ ಮತ್ತೆ ಒಟ್ಟಿಗೆ ತೆರೆ ಮೇಲೆ ತರಲಿರುವ ಸಂಜಯ್ ಲೀಲಾ ಬನ್ಸಾಲಿ
ದೆಹಲಿ , ಶುಕ್ರವಾರ, 24 ಜೂನ್ 2016 (18:16 IST)
ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಸಿಂಗ್‌ನ್ನು ತೆರೆ ಮೇಲೆ ಕಾಣಲು ಬಯಸಿರುವ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. 
ಬಾಜಿರಾವ್ ಮಸ್ತಾನಿ ಮೂಲಕ ಹಲವರ ಮನಸ್ಸು ಕದ್ದ ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಸಿಂಗ್ ಮತ್ತೆ ತೆರೆ ಮೇಲೆ ತರಲಿದ್ದಾರೆ ಎನ್ನುವ ಊಹಾಪೋಹಗಳು ಎದ್ದಿವೆ.


ಇಬ್ಬರು ಬಿಗ್ ಸ್ಕ್ರೀ ನ್ ಮತ್ತೆ ಎಂಟ್ರಿ ನೀಡಲಿದ್ದಾರಂತೆ. ಇಬ್ಬರನ್ನು ತೆರೆ ಮೇಲೆ ತರಲು ಸಂಜಯ್ ಲೀಲಾ ಬನ್ಸಾಲಿ ಸಿದ್ಧತೆಯಲ್ಲಿದ್ದಾರೆ. ಈ ಮೂವರು ಜೋಡಿಗಳು ಮತ್ತೆ ಪ್ರೇಕ್ಷಕರಿಗೆ ಮೋಡಿ ಮಾಡಲು ಬರಲಿವೆ ಎಂದು ಹೇಳಲಾಗ್ತಿದೆ. ಮೂಲಗಳ ಪ್ರಕಾರ ಸಂಜಯ್ ಲೀಲಾ ಬನ್ಸಾಲಿ ರಣಬೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆಯನ್ನು ಮತ್ತೆ ತೆರೆ ಮೇಲೆ ತರಲು ನಿರ್ಧರಿಸಿದ್ದಾರಂತೆ. ಲವ್ ಸ್ಟೋರಿ ಚಿತ್ರದಲ್ಲಿ ಇಬ್ಬರನ್ನು ಒಟ್ಟಿಗೆ ತರಲಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಮೊನ್ನ ಮಾಧ್ಯಮದವರ ಜತೆ ಮಾತನಾಡಿದ್ದ ದೀಪಿಕಾ ಪಡುಕೋಣೆ ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ್ದರು. ಅವರು ಅಭಿನಯದ ಮುಂದಿನ ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ ಎಂದು ಕೂಡ ಹೇಳಿದ್ದರು. ಇತ್ತ ಬನ್ಸಾಲಿ ಅವರ ಮುಂದಿನ ಚಿತ್ರ ಪದ್ಮಾವತಿ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ ಎಂದು ಹೇಳಿದ್ರು. ಆದರೆ ಸದ್ಯಕ್ಕಂತು ಖಚಿತ ಮಾಹಿತಿ ತಿಳಿದು ಬರಬೇಕು ಅಷ್ಟೇ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತೆಲಗು ಹಿರಿಯ ನಟ ಜೆವಿ ರಾಮನ್ ನಿಧನ