Select Your Language

Notifications

webdunia
webdunia
webdunia
webdunia

ಮಾದಕವಸ್ತು ಚಟಕ್ಕೆ ಬಲಿಯಾದ ಕರಾಳ ಕಥೆ ಬಿಚ್ಚಿಟ್ಟ ಸಂಜಯ್ ದತ್

sanjay dutt
ನವದೆಹಲಿ: , ಶನಿವಾರ, 7 ಮೇ 2016 (18:59 IST)
ಬಾಲಿವುಡ್ ನಟ ಸಂಜಯ್ ದತ್ ಅವರ ನಿಜಜೀವನವು ಯಾವುದೇ ಬ್ಲಾಕ್‌ಬಸ್ಟರ್ ಚಿತ್ರಕಥೆಗಿಂತ ಕಡಿಮೆಯಿಲ್ಲ. ಮಾದಕವಸ್ತುಗಳ ಚಟ, ವಿವಾದಗಳು, ಜೈಲು ಎಲ್ಲವನ್ನೂ ತಮ್ಮ 56 ವರ್ಷಗಳ ಜೀವನದಲ್ಲಿ ಸಂಜಯ್ ದತ್ ಅನುಭವಿಸಿದ್ದಾರೆ.

ಇತ್ತೀಚಿನ ಸಮಾರಂಭವೊಂದರಲ್ಲಿ ಅವರು  ಮಾದಕವಸ್ತುಗಳ ಚಟಕ್ಕೆ ಬಲಿಯಾದ ತಮ್ಮ ಜೀವನದ ಕರಾಳ ಹಂತವನ್ನು ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ನಿಜವಾಗಲೂ ಶಾಕಿಂಗ್ ಆಗಿತ್ತು.  ಬಿ-ಟೌನ್ ಮುನ್ನಾಭಾಯಿ 12 ವರ್ಷಗಳ ಮಾದಕವಸ್ತು ಚಟದ ಸುದೀರ್ಘ ಪ್ರಯಾಣದಲ್ಲಿ ಕಂಡ ಕಂಡ ಮಾದಕ ವಸ್ತುಗಳನ್ನು ಸೇವಿಸಿದ್ದರು. ಅವುಗಳ ಚಟದಿಂದ ಹೊರಬರಲಾಗದೇ ನರಕಯಾತನೆ ಅನುಭವಿಸಿದ್ದರು. 

ತಮ್ಮ ಕುಟುಂಬಕ್ಕಾಗಿ ತಾವು ಮಾದಕವಸ್ತು ಚಟ ತ್ಯಜಿಸಲಿಲ್ಲ. ತಾವು ಅದರಿಂದ ಹೊರಬರಬೇಕೆಂಬ ಮನೋನಿರ್ಧಾರದಿಂದ ಅದನ್ನು ತ್ಯಜಿಸಿದೆ.  ನಾನು ಯುವಜನರಿಗೆ ಹೇಳುವುದೇನೆಂದರೆ, ನಿಮ್ಮ ಜೀವನದಲ್ಲಿ ಕೆಲಸವನ್ನು ಪ್ರೀತಿಸಿ, ಕುಟುಂಬವನ್ನು ಪ್ರೀತಿಸಿದರೆ ಅದು ಕೊಕೇನ್‌ಗಿಂತ ಎಷ್ಟೋ ಶ್ರೇಷ್ಟ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಸಣ್ಣ ನಗರದಿಂದ ಬಂದವಳು.. ದೊಡ್ಡ ಕನಸುಗಳನ್ನು ಕಂಡವಳು - ಕಂಗನಾ ರಣಾವತ್